Breaking
22 Mar 2026, Sun

ಮಂಜೇಶ್ವರ : ಸರಕಾರಿ ಶಾಲಾ ಮೇಲ್ಛಾವಣಿ ಕುಸಿತ: ಮಕ್ಕಳು, ಸಿಬ್ಬಂದಿಗಳು ಅಪಾಯದಿಂದ ಪಾರು

ಮಂಜೇಶ್ವರ: ಶಾಲಾ ಮೇಲ್ಛಾವಣಿ ಕುಸಿದು ಬಿದ್ದು ಅದೃಷ್ಟವಶಾತ್‌ ಬಹು ದೊಡ್ಡಅಪಾಯ ತಪ್ಪಿದ ಘಟನೆ ಉದ್ಯಾವರದ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಸೆ.25 ರ ಬೆಳಿಗ್ಗೆ ಎರಡನೇ ತರಗತಿಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಈ ಸಂದರ್ಭದಲ್ಲಿ ಮಕ್ಕಳು ತರಗತಿಯಲ್ಲಿ ಇಲ್ಲದೆ ಇದ್ದುದುದರಿಂದ ದುರಂತ ತಪ್ಪಿದೆ. ಆದರೆ ಅಲ್ಲೇ ಸಮೀಪದಲ್ಲಿದ್ದ ಶಾಲಾ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.

ಹಳೆಯದಾದ ಈ ಶಾಲಾ ಕಟ್ಟಡ ಪುನರ್ ನಿರ್ಮಿಸಬೇಕು ಎಂಬ ಒತ್ತಾಯ ಹಲವು ಸಮಯಗಳಿಂದ ಕೇಳಿ ಬರುತ್ತಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *