ಕಾಸರಗೋಡು: ಕ್ಲಿನಿಕ್ ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಕಾಸರಗೋಡು ಅಶ್ವಿನಿ ನಗರದಲ್ಲಿ ಸೆ.22ರಂದು ನಡೆದಿದೆ.

ಸೋಮವಾರ ತಡರಾತ್ರಿ 11.30 ರ ಸುಮಾರಿಗೆ ಕ್ಲಿನಿಕ್ ನಲ್ಲಿ ಹೊಗೆ ಕಂಡುಬಂದ ಹಿನ್ನಲೆಯಲ್ಲಿ ಸಮೀಪದ ಹೊಟೇಲ್ ಕಾರ್ಮಿಕರು ಅಗ್ನಿ ಶಾಮಕ ದಳದ ಸಿಬ್ಬಂದಿ ಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪಾಯವನ್ನು ತಪ್ಪಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ಈ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದ್ದು, ಕ್ಲಿನಿಕ್ ನಲ್ಲಿದ್ದ ಫ್ಯಾನ್, ಕಂಪ್ಯೂಟರ್ ಗಳು, ಫರ್ನಿಚರ್, ಫ್ರಿಡ್ಜ್, ಕ್ಲಿನಿಕ್ ಉಪಕರಣಗಳು, ಔಷಧಿಗಳು, ಎ.ಸಿ ಮೊದಲಾದವು ಬೆಂಕಿಗಾಹುತಿಯಾಗಿದ್ದು, ಸುಮಾರು 25 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.




