Breaking
20 Sep 2026, Sun

ಉಡುಪಿ : ಎಂಡಿಎಂಎ ಮಾರಾಟ ಮಾಡಲು ಯತ್ನ: ಇಬ್ಬರು ಪೊಲೀಸ್‌ ವಶಕ್ಕೆ

ಉಡುಪಿ: ಪಡುಬಿದ್ರಿ ಸಮೀಪದ ಬಡಾ ಗ್ರಾಮ ಉಚ್ಚಿಲ ಪೊಲ್ಯ ರಸ್ತೆಯ ಮೈದಾನದಲ್ಲಿ ಮಾದಕ ದ್ರವ್ಯ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಲ್ಲಾರು ಗ್ರಾಮದ ಪಕೀರ್ಣಕಟ್ಟೆ ಮಸೀದಿ ಬಳಿಯ ನಿವಾಸಿ ಫರ್ಹಾನ್ (27) ಹಾಗೂ ಕಾಪು ಕೊಂಬಗುಡ್ಡೆ ನಿವಾಸಿ ಮಹಮ್ಮದ್ ಹಾಸಿಂ (21) ಎಂದು ಗುರುತಿಸಲಾಗಿದೆ.

ಪೊಲೀಸರು ಆರೋಪಿಗಳಿಂದ ಸುಮಾರು 30 ಸಾವಿರ ರೂ. ಮೌಲ್ಯದ 9.37 ಗ್ರಾಂ ತೂಕದ ಎಂಡಿಎಂಎ ಮಾತ್ರೆ ಗಳ ಪ್ಯಾಕೆಟ್‌ಗಳನ್ನು, 5 ಸಾವಿರ ರೂ. ನಗದು, ಒಂದು ಮೊಬೈಲ್ ಹಾಗೂ ಆರೋಪಿಗಳು ಬಳಸಿದ್ದ ಮೋಟಾರು ಸೈಕಲನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *