Breaking
24 Mar 2026, Tue

ಮಂಗಳೂರಿನ ಹೆಸರಾಂತ ಪೂಂಜಾ ಇಂಟರ್ ನ್ಯಾಷನಲ್ ಹೊಟೇಲ್ ಮಾಲಕ ಪ್ರಭಾಕರ ಪೂಂಜಾ (72) ನಿಧನ

ಮಂಗಳೂರು: ನಗರದ ಹಂಪನಕಟ್ಟೆಯ ಪೂಂಜಾ ಇಂಟರ್ ನ್ಯಾಷನಲ್ ಹೊಟೇಲ್ ಇದರ ಮಾಲಕ, ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ(72) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

40 ವರ್ಷಗಳ ಹಿಂದೆ ಮುಂಬೈನಲ್ಲಿ ಭೂಗತ ಜಗತ್ತಿನ ಸಂಪರ್ಕದಲ್ಲಿದ್ದ ಪ್ರಭಾಕರ ಪೂಂಜಾ ಅಲ್ಲಿನ ಒಬ್ಬ ಡಾನ್ ಗೆ ಕಾರು ಚಾಲಕನಾಗಿದ್ದರು. ಆನಂತರ, 1986ರಲ್ಲಿ ಮಂಗಳೂರಿಗೆ ಬಂದು ಪೂಂಜಾ ಇಂಟರ್ ನ್ಯಾಷನಲ್ ಹೊಟೇಲ್ ನಿರ್ಮಾಣ ಮಾಡಿದ್ದರು. ಆಗ ಇದ್ದ ಮೋತಿ ಮಹಲ್ ಬಿಟ್ಟರೆ ಅದ್ದೂರಿ ಮತ್ತು ಬೃಹತ್ ಹೊಟೇಲ್ ಎಂದು ಪೂಂಜಾ ಹೊಟೇಲ್ ಹೆಸರು ಮಾಡಿತ್ತು.

ಆರಂಭದಲ್ಲಿ ಮುಂಬೈ ನಂಟು ಇದ್ದರೂ ಆನಂತರ ಅಲ್ಲಿನ ನಂಟನ್ನು ಬಿಟ್ಟು ಮಂಗಳೂರಿನಲ್ಲೇ ಇದ್ದರು. ಸಣ್ಣ ವಯಸ್ಸಿನಲ್ಲೇ ಮುಂಬೈ ತೆರಳಿದ್ದರಿಂದ ಅವರಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ.

ಹಿಂದಿ, ಮರಾಠಿ, ತುಳು ಮಾತ್ರ ಗೊತ್ತಿತ್ತು. ಮುಂಬೈ, ಮಂಗಳೂರಿನ ಹೆಚ್ಚಿನ ಪೊಲೀಸ್ ಅಧಿಕಾರಿಗಳ ಸಂಪರ್ಕ ಹೊಂದಿದ್ದರು. ಬಳಿಕ ಮಂಗಳೂರಿನಲ್ಲಿ ಹೊಟೇಲ್ ವ್ಯವಹಾರ ಆರಂಭಿಸಿದ್ದರು.

Leave a Reply

Your email address will not be published. Required fields are marked *