Breaking
19 Sep 2026, Sat

ಬದಿಯಡ್ಕದಲ್ಲಿ ಕಾಂಕ್ರೀಟ್ ಕಾರ್ಮಿಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಂಕ್ರೀಟ್ ಕಾರ್ಮಿಕನೋರ್ವನ ಮೃತದೇಹ ಮನೆ ಸಮೀಪದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ ಘಟನೆ ಕಾಸರಗೋಡುವಿನ ಬದಿಯಡ್ಕದಲ್ಲಿ ನಡೆದಿದೆ.

ನೆಕ್ರಾಜೆ ಚೇಡಿಕಾನ ಉನ್ನತಿಯ ಸುಮಂತ್ ಸಿ.ಎಚ್. (26) ಮೃತ ಕಾರ್ಮಿಕನಾಗಿದ್ದಾನೆ.

ಬುಧವಾರ ಸಂಜೆ ಸುಮಾರು ಆರು ಗಂಟೆಗೆ ಮರದ ರೆಂಬೆಗೆ ನೇಣು ಬಿಗಿದು ಆತ್ಮಹತ್ಯೆ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *