Breaking
12 May 2026, Tue

ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಮರಳು ಸಾಗಾಟ ವಶಕ್ಕೆ ಪಡೆದ ಪೊಲೀಸರು

ಬೆಳ್ತಂಗಡಿ: ಅಕ್ರಮವಾಗಿ ಮರಳು ಸಾಗಾಟ ಮಾಡುತಿದ್ದ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಸೆ. 15ರಂದು ನಡೆದಿದೆ.

ಸಮೀರ್ ಎಂಬವರಿಗೆ ಸೇರಿದ ವಾಹನದಲ್ಲಿ ಎಂ ಸ್ಯಾಂಡ್ ತೆಗೆದುಕೊಂಡು ಹೋಗುವ ಅನುಮತಿಯನ್ನು ಪಡೆದುಕೊಂಡು ಟಿಪ್ಪರಿನ ಕೆಲ ಭಾಗದಲ್ಲಿ ಮರಳನ್ನು ತುಂಬಿಸಿ ಮೇಲ್ಭಾಗದಲ್ಲಿ ಎಂ. ಸ್ಯಾಂಡ್ ತುಂಬಿಸಿಕೊಂಡು ಬರುತ್ತಿರುವ ಮಾಹಿತಿಯೊಂದು ಲಭ್ಯವಾಗಿತ್ತು.

ಈ ಬಗ್ಗೆ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸುವಾಗ ಅಕ್ರಮ ಮರಳು ಸಾಗಾಟ ಕಂಡುಬಂದಿದ್ದು ತಕ್ಷಣ ಪರಿಶೀಲಿಸಿ ಎಫ್ ಫೈಯರ್ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *