Breaking
29 Jun 2026, Mon

ಶ್ರೀ ದುರ್ಗಾಂಬಾ ಮಂದಿರ ಮತ್ತು ಹಿಂದೂ ಸೇವಾ ಸಮಿತಿ ಮಂಡಾಡಿಯಲ್ಲಿ ನವರಾತ್ರಿ ಉತ್ಸವ

ಬಂಟ್ವಾಳ: ಶ್ರೀ ದುರ್ಗಾಂಬಾ ಮಂದಿರ (ರಿ.) ಮತ್ತು ಹಿಂದೂ ಸೇವಾ ಸಮಿತಿ ಮಂಡಾಡಿ ಬಂಟ್ವಾಳದಲ್ಲಿ ಸೆ.22 ಸೋಮವಾರದಿಂದ ಅ. 02 ಗುರುವಾರದವರೆಗೆ ನವರಾತ್ರಿ ಉತ್ಸವವೂ ನಡೆಯಲಿದೆ.

ಅ.2 ಗುರುವಾರದಂದು ಸಂಜೆ ಗಂಟೆ 5-30 ಕ್ಕೆ ಮಾತೆಯರಿಂದ ಲಕ್ಷ್ಮಿ ಸಹಸ್ರನಾಮ, ಅಷ್ಟೋತ್ತರ ಸ್ತೋತ್ರ ಪಠಣ ಮತ್ತು ಭಜನಾ ಸಂಕೀರ್ತನಾ ಸೇವೆ ನಡೆಯಲಿದ್ದು, ಬಳಿಕ 8-30ಕ್ಕೆ ಶ್ರೀ ದೇವಿಗೆ ಮಂಗಳಾರತಿ ತದನಂತರ ಅನ್ನ ಸಂತರ್ಪಣೆ ನಡೆಯಲಿದೆ.

ಈ ನವರಾತ್ರಿ ಉತ್ಸವ ಅಂಗವಾಗಿ 11 ತಂಡಗಳು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಳ್ಳಲಿದೆ.

ಇದೇ ವೇಳೆ ಶ್ರೀ ದುರ್ಗಾಂಬಾ ಮಂದಿರ (ರಿ.) ಮತ್ತು ಹಿಂದೂ ಸೇವಾ ಸಮಿತಿಯ 27 ನೇ ವರ್ಷದ ಬಂಟ್ವಾಳದ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯ ಅಂಗವಾಗಿ ಸ್ತಬ್ಧ ಚಿತ್ರ ಮೆರವಣಿಗೆಯು ಸಾಯಂಕಾಲ ಮಂದಿರದಿಂದ ಹೊರಡಲಿದೆ.

ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *