ಸುಳ್ಯ: ಚಲಿಸುತ್ತಿದ್ದ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಮಗುಚಿಬಿದ್ದ ಘಟನೆ ಸುಳ್ಯ ತಾಲೂಕಿನ ಪಡ್ನೂರು ಗ್ರಾಮದ ಶೇಣಿ ಎಂಬಲ್ಲಿ ಸೆ.16ರಂದು ನಡೆದಿದೆ.

ಕುಕ್ಕುಜಡ್ಕದ ಭಾಸ್ಕರ ಆಚಾರ್ಯ ಎಂಬವರು ಆಟೋದಲ್ಲಿ ಹೋಗುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದ್ದು ರಿಕ್ಷಾ, ಮನೆಯೊಂದರ ಅಂಗಳಕ್ಕೆ ಬಿದ್ದಿದೆ. ಪರಿಣಾಮ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಆಟೋ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.



