Breaking
23 Mar 2026, Mon

ಸೆಪ್ಟೆಂಬರ್ 16ರಂದು ಮಂಗಳೂರಿನಲ್ಲಿ ಎಬಿವಿಪಿಯ “ರಾಣಿ ಅಬ್ಬಕ್ಕ ರಥಯಾತ್ರೆ” ಯ ಬೃಹತ್ ಶೋಭಾಯಾತ್ರೆ ಹಾಗೂ ಸಮಾರೋಪ ಸಮಾರಂಭ

ಮಂಗಳೂರು: ಎಬಿವಿಪಿ ರಾಣಿ ಅಬ್ಬಕ್ಕ ರಥಯಾತ್ರೆ, ಮಂಗಳೂರಿನಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಸಮಾರೋಪ ಸಮಾರಂಭದ ಕುರಿತು ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ “ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದವತಿಯಿಂದ ಈ ನೆಲದ ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ಜಯಂತಿಯ ಪ್ರಯುಕ್ತ ಅಬ್ಬಕ್ಕ ರಥಯಾತ್ರೆಯನ್ನ ಸೆಪ್ಟೆಂಬರ್ 6 ರಿಂದ ಆರಂಭಿಸಿದ್ದು ರಾಜ್ಯಾದ್ಯಂತ ಬಹಳ ಯಶಸ್ವಿ ಯಾಗಿ ಸಂಚರಿಸಿ ಸೆಪ್ಟೆಂಬರ್ 16ರಂದು ಮಂಗಳೂರು ತಲುಪಲಿದೆ, ಆ ಪ್ರಯುಕ್ತ ಬೆಳಗ್ಗೆ 9.30ಕ್ಕೆ ಸರಿಯಾಗಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕ್ರೀಡಾಂಗಣದಿಂದ,ಜ್ಯೋತಿ ಸರ್ಕಲ್ ಮಾರ್ಗವಾಗಿ ಹಂಪನಕಟ್ಟೆಯ ವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಸುಮಾರು 3000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ” ಎಂದರು.

ಅನಂತರ 11.30ಕ್ಕೆ ಸರಿಯಾಗಿ ಪುರಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆಯ 5.30ರ ಹೊತ್ತಿಗೆ ರಥ ಅಬ್ಬಕ್ಕಳ ಕರ್ಮಭೂಮಿ ಉಳ್ಳಾಲ ತಲುಪಿ ನಂತರ ಮಾಡೂರು ಅಯ್ಯಪ್ಪ ಮಂದಿರದಿಂದ ಬೀರಿ ಜಂಕ್ಷನ್ ಗಣೇಶ ಮಂದಿರದ ಬಳಿ ಸಾರ್ವಜನಿಕ ಸಭೆ ಹಾಗೂ ರಥ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಜಿಲ್ಲಾ ಸಂಚಾಲಕ ಶ್ರೀಜಿತ್, ಮಂಗಳೂರು ತಾಲೂಕು ಸಂಚಾಲಕರ ಮೋನಿಶ್ ತುಮಿನಾಡು, ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೀಲಕ್ಷ್ಮಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *