ಸುರತ್ಕಲ್ ನಲ್ಲಿ ಕಳವು ಯತ್ನ ಪ್ರಕರಣ : ಕತ್ತಿ ಹಿಡಿದು ಸಂಚರಿಸುವ ಯುವಕರಿಂದ ಬೆಚ್ಚಿ ಬಿದ್ದ ಸ್ಥಳೀಯರು

ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಯತ್ನ ಪ್ರಕರಣಗಳು ಹೆಚ್ಚಿದ್ದು, ಕೆಲವರು ಅನಾಮಧೇಯ ಯುವಕರು ರಾತ್ರಿ ವೇಳೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ.

ಮಾತ್ರವಲ್ಲ ಕೆಲವು ಕಡೆಗಳಲ್ಲಿ ಯುವಕರು ಕತ್ತಿ ಹಿಡಿದುಕೊಂಡು ಹೊಗುವ ದೃಶ್ಯಗಳು ಕಂಡು ಬಂದಿದ್ದು ನಾವು ಭೀತಿಯಲ್ಲಿ ದಿನಕಳೆಯುತ್ತಿದ್ದೇವೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸುರತ್ಕಲ್ ಭಾಗದಲ್ಲಿ ಕೆಲವೊಂದು ದಿನಗಳಿಂದ ಕಳವು ಯತ್ನ ನಡೆದಿದೆ. ಮುಂಚೂರು ಭಾಗದಲ್ಲಿ ಕಳವು ಯತ್ನ ನಡೆದಿದ್ದು, ಕೆಲವು ಯುವಕರು ಕತ್ತಿ ಹಿಡಿದುಕೊಂಡು ಅನುಮಾನಾಸ್ಪದವಾಗಿ ಸಂಚರಿಸುವುದು, ಬಾಗಿಲು ಬಡಿಯುವ ಘಟನೆಗಳು ಎರಡ್ಮೂರು ಕಡೆಗಳಲ್ಲಿ ಕಂಡು ಬಂದಿದೆ.

ಅಲ್ಲದೆ ಸುಭಾಷಿತ ನಗರದಲ್ಲೂ ಯುವಕರು ಅನುಮಾನಾಸ್ಪದವಾಗಿ ಸಂಚರಿಸುವುದು ಕಂಡು ಬಂದಿದ್ದು, ಕೆಲವೊಂದು ದೃಶ್ಯಗಳು ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *