Breaking
12 May 2026, Tue

ಅನೈತಿಕ ಸಂಬಂಧ ಶಂಕೆ, ಪತ್ನಿ ಮತ್ತವಳ ಪ್ರಿಯಕರನ ಕೊಚ್ಚಿ ಕೊಂದ ಪತಿ

ಚೆನ್ನೈ: ಪತಿಯೊಬ್ಬ ಪತ್ನಿ ಮತ್ತವಳ ಪ್ರಿಯಕರನನ್ನು ಕೊಂದು, ರುಂಡಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ.

ಪತ್ನಿ ಲಕ್ಷ್ಮಿ ಕೊಲೆಯಾದ ಮಹಿಳೆಯಾಗಿದ್ದು, ವೃತಿಯಲ್ಲಿ ಮರ ಕಡಿಯುವ ಕೆಲಸ ಮಾಡುವ ಕೊಲಂಜಿ ಎಂಬಾತ ಕೊಲೆ ಮಾಡಿರುವ ಆರೋಪಿ ಪತಿಯಾಗಿದ್ದಾನೆ. ಈತ ತನ್ನ ಪತ್ನಿ ಲಕ್ಷ್ಮಿ ಗೆ ತಂಗರಸು ಜೊತೆ ಸಂಬಂಧವಿದೆ ಎಂದು ಶಂಕಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸವಿದೆ ಹೋಗ್ತಿದ್ದೀನಿ, ಬರೋದು ತುಂಬಾ ತಡವಾಗುತ್ತೆ ಎಂದು ಪತ್ನಿ ಬಳಿ ಹೇಳಿ ಹೊರಟಿದ್ದ ಕೊಲಂಜಿ, ಸ್ವಲ್ಪ ಸಮಯದಲ್ಲೇ ಹಿಂದಿರುಗಿ ಬಂದಿದ್ದಾನೆ. ಮನೆಯ ತಾರಸಿಯಲ್ಲಿ ಇಬ್ಬರೂ ಜತೆಗಿರುವುದನ್ನು ಕಂಡಿದ್ದಾನೆ. ಆಗ ತನಿಗಿದ್ದ ಅನುಮಾನ ಖಾತ್ರಿಯಾದಾಗ ಇಬ್ಬರನ್ನೂ ಕುಡುಗೋಲಿನಿಂದ ಕೊಚ್ಚಿ ಕೊಂದು, ಬಳಿಕ ರುಂಡವನ್ನು ದೇಹದಿಂದ ಬೇರೆ ಮಾಡಿದ್ದಾನೆ. ಅನದ್ನು ಹಿಡಿದು ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಆತ ತನ್ನ ದ್ವಿಚಕ್ರ ವಾಹನಕ್ಕೆ ಎರಡೂ ತಲೆಗಳನ್ನು ಕಟ್ಟಿ ವೆಲ್ಲೂರು ಕೇಂದ್ರ ಜೈಲಿಗೆ ಹೋಗಿ ಶರಣಾಗಿದ್ದಾನೆ. ವಂಜಾರಂ ಪೊಲೀಸರು ಮನೆಯಿಂದ ತಲೆ ಇಲ್ಲದ ಶವಗಳನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಸ್ಥಳದ ದೃಶ್ಯಗಳಲ್ಲಿ ತಲೆಯಿಲ್ಲದ ಶವಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಪೊಲೀಸರು ಬಂದಾಗ ಗ್ರಾಮಸ್ಥರು ಮನೆಯ ಬಳಿ ಜಮಾಯಿಸಿದ್ದು ವಂಜಾರದ ಪೊಲೀಸರು ಶವಗಳನ್ನು ವಶಪಡಿಸಿಕೊಂಡರು. ಕೊಲಂಜಿ ನ್ಯಾಯಾಂಗ ಬಂಧನದಲ್ಲಿರುವುದರಿಂದ ದಂಪತಿಯ ಮೂವರು ಹೆಣ್ಣುಮಕ್ಕಳನ್ನು ಸಂಬಂಧಿಕರ ಆರೈಕೆಯಲ್ಲಿ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಚೆನ್ನೈನ ವಂಜಾರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವೆರೆದಿದೆ.

Leave a Reply

Your email address will not be published. Required fields are marked *