Breaking
19 Sep 2026, Sat

ಉಡುಪಿಯ ದಲಿತ ಯುವತಿಗೆ ಮದುವೆ ಭರವಸೆ ನೀಡಿ ದೈಹಿಕ ಸಂಬಂಧ: ಮೂಡುಬಿದಿರೆಯ ಫೋಟೋಗ್ರಾಫರ್ ನ ಬಂಧನ

ಮೂಡುಬಿದಿರೆ: ದಲಿತ ಯುವತಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ, ದೈಹಿಕ ಸಂಬಂಧ ಮಾಡಿ ಬಳಿಕ ಮದುವೆಗೆ ನಿರಾಕರಿಸಿದ ಆರೋಪದ ಮೇಲೆ ಆರೋಪಿಯನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಉಪ್ಪಿನಂಗಡಿ ಬೆದ್ರೋಡಿಯ ನಿವಾಸಿ, ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಸಂಕೇತ್ ಗಾಣಿಗ(31) ಪ್ರಕರಣದ ಆರೋಪಿಯಾಗಿದ್ದಾನೆ.

ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಸಂಕೇತ್ ಗಾಣಿಗ ಉಡುಪಿ ಮೂಲದ ಯುವತಿಯೊಬ್ಬಳೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ ಸಲುಗೆ ಬೆಳೆಸಿ, ಬಳಿಕ ದೈಹಿಕವಾಗಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಜಾತಿಯ ನೆಪವೊಡ್ಡಿ ಮದುವೆಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಂತ್ರಸ್ತೆ ಯುವತಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *