ಕಾಸರಗೋಡು : ಮಂಜೇಶ್ವರ ಸಮೀಪದ ಮೀಯಪದವು ಅಡ್ಕದಗುರಿ ಎಂಬಲ್ಲಿ ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮೃತಪಟ್ಟವರು ಐರಿನ್ ಡಿಸೋಜ (60)ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಮಲಗಿದ್ದ ಐರಿನ್ ಬೆಳಗ್ಗೆ ಮನೆಯವರು ಎದ್ದಾಗ ಕಾಣೆಯಾಗಿದ್ದರು ಶೋಧ ನಡೆಸಿದಾಗ ಮೃತದೇಹ ಮನೆ ಅಂಗಳದ ಬಾವಿಯಲ್ಲಿ ಪತ್ತೆಯಾಗಿದೆ
ಅಗ್ನಿ ಶಾಮಕ ದಳದ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದರು.
ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.



