ಮಂಗಳೂರು: ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ, ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಅಧ್ಯಕ್ಷತೆಯಲ್ಲಿ ಅ. 5 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 25 ಜ್ಯೂರಿ ಸದಸ್ಯರನ್ನೊಳಗೊಂಡ ಸಮಿತಿಯು ಪರಿಶೀಲನೆ ನಡೆಸಿ 2025ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಗೆ ರಚನಾ ಉದ್ಯಮಿ ಆಸ್ಟಿನ್ ರೋಚ್ ಬೆಂಗಳೂರು, ರಚನಾ ವೃತ್ತಿಪರ ಜಾನ್ ರಿಚರ್ಡ್ ಲೋಬೊ ಕೆ.ಎ.ಎಸ್, ಮಂಗಳೂರು, ರಚನಾ ಕೃಷಿಕ ಡಾ. ಗಾಡ್ವಿನ್ ರೊಡ್ರಿಗಸ್ ಪಿಎಚ್‌ಡಿ, ಬೆಳ್ವಾಯಿ, ಮಂಗಳೂರು, ರಚನಾ ಅನಿವಾಸಿ ಉದ್ಯಮಿ ಪ್ರತಾಪ್ ಮೆಂಡೋನ್ಸಾ, ದುಬಾಯ್, ರಚನಾ ಮಹಿಳಾ ಸಾಧಕಿ – ಶೋಭಾ ಮೆಂಡೋನ್ಸಾ, ದುಬೈ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಮಾನ್ಯ ಸಚಿವರು ಕೆ. ಜೆ. ಜಾರ್ಜ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಯುಎಇಯ ಬುರ್ಜೀಲ್ ಹೋಲ್ಡಿಂಗ್ಸ್‌ನ ಸಮೂಹ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ಸುನಿಲ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಡೀನ್ ಮತ್ತು ನಿರ್ದೇಶಕಿ ಡಾ. ಸಿಂಥಿಯಾ ಮಿನೇಜಸ್ ಇವರು ಭಾಗವಹಿಸಲಿದ್ದಾರೆ.

1998ರಲ್ಲಿ ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ರಚನಾ ಸಂಸ್ಥೆಯು ಕಥೊಲಿಕ್ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ಜೋಡಿಸುವಿಕೆ, ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ನೀಡುವುದರೊಂದಿಗೆ ಇದಕ್ಕೆ ಪೂರಕವಾಗಿ ರಚನಾ ಉದ್ಯಮ ತರಬೇತಿ ವಿಭಾಗವನ್ನು ಆರಂಭಿಸಿ ಕಳೆದ ಕೆಲವು ವರ್ಷಗಳಿಂದ ಹಲವು ಯುವ ಜನರಿಗೆ ತರಬೇತಿಯನ್ನು ನೀಡುತ್ತಾ ಬಂದಿದೆ. ಅಲ್ಲದೆ ಕ್ರೈಸ್ತ ಕಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವೃತ್ತಿಪರರು, ಕೃಷಿಕರು, ಅನಿವಾಸಿ ಭಾರತೀಯರು ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರತಿಷ್ಠಿತ ರಚನಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ – ಅಧ್ಯಕ್ಷರಾದ ಜೊನ್ಅ ಬಿ. ಮೊಂತೇರೊ , ಕಾರ್ಯದರ್ಶಿ ವಿಜಯ್ ವಿ. ಲೋಬೊ ಖಜಾಂಚಿ ನೆಲ್ಸನ್ ಮೊಂತೇರೊ, ಉಪಾಧ್ಯಕ್ಷರು ನವೀನ್ ಲೋಬೊ ಹಾಗೂ ಯುಲಾಲಿಯಾ ಡಿಸೋಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.


