Breaking
22 Mar 2026, Sun

ಉಜಿರೆಯಲ್ಲಿ ಬೈಕ್ ಹಾಗೂ ಲಾರಿ ನಡುವೆ ಅಪಘಾತ : ಸವಾರ ಗಂಭೀರ ಆಸ್ಪತ್ರೆಗೆ ದಾಖಲು

ಉಜಿರೆ: ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಜಿರೆಯ ಹಳ್ಳಿಮನೆ ಸಮೀಪ ಸೆ.3 ರಂದು ಸಂಜೆಯ ವೇಳೆ ನಡೆದಿದೆ.

ಚಾರ್ಮಾಡಿ ಕಡೆಯಿಂದ ಬರುತ್ತಿದ್ದ ಬೈಕ್ ವಿರುದ್ಧ ದಿಕ್ಕಿನಿಂದ ಅಡುಗೆ ಅನಿಲ ತೆಗೆದುಕೊಂಡು ಬರುತ್ತಿದ್ದ ಲಾರಿಯ ಮಧ್ಯೆ ಈ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಬಗ್ಗೆ ತಿಳಿದು ಬಂದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ಹಾನಿಗೊಂಡಿದೆ.

ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *