Breaking
22 Mar 2026, Sun

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ರವರನ್ನು ಕೈ ಬಿಡುವಂತೆ ಕರ್ನಾಟಕ ಸರಕಾರದ ಮಾನ್ಯ ಮುಖ್ಯ ಮಂತ್ರಿಗಳಿಗೆ ಪ್ರಭಾಕರ್‌ ಪ್ರಭು ಮನವಿ

ಬಂಟ್ವಾಳ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ರವರನ್ನು ಕೈ ಬಿಡುವಂತೆ ಕರ್ನಾಟಕ ಸರಕಾರದ ಮಾನ್ಯ ಮುಖ್ಯ ಮಂತ್ರಿಗಳಿಗೆ ಪ್ರಭಾಕರ್‌ ಪ್ರಭು ಮನವಿ ಸಲ್ಲಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ 2025 ರ ಐತಿಹಾಸಿಕ ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ರವರನ್ನು ಸರಕಾರ ಆಯ್ಕೆ ಮಾಡಿದಾಗಿನಿಂದ ರಾಜ್ಯದಾದ್ಯಂತ ಒಂದಷ್ಟು ಗೊಂದಲದ ವಾತಾವರಣಗಳು ಸೃಷ್ಟಿಯಾಗಿವೆ . 2023 ಜನ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಬಾನು ಮುಷ್ತಾಕ್ ರವರು ಕನ್ನಡ ಭುವನೇಶ್ವರಿಗೆ ಅರಶಿನ , ಕುಂಕುಮ ಲೇಪಣ ಮಾಡಿರುವ ಬಗ್ಗೆ ಹಾಗೂ ಕನ್ನಡ ಧ್ವಜ ಅರಶಿನ , ಕುಂಕುಮದ ಪ್ರತೀಕವಾಗಿದೆ . ಕನ್ನಡ ಅಂದರೆ ಭುವನೇಶ್ವರಿ ಎಂದು ಯಾಕೆ ಬಿಂಬಿಸಿಕೊಳ್ಳುತ್ತೀರಾ ಎಂದು ಆಕ್ಷೇಪಣೆಯ ಮಾತುಗಳನ್ನು ಆಡಿರುವುದು ಜಗಜಾಯಿರವಾಗಿರುವುದಲ್ಲದೇ ನಾಡಿನ ಸಮಸ್ತ ಕನ್ನಡಿಗರ ಆಕ್ಷೇಪಣೆಗೆ ಕಾರಣವಾಗಿರುತ್ತದೆ .

ಬಾನು ಮುಷ್ತಾಕ್ ರವರ ಕನ್ನಡದ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿದ ಸಾಧನೆ ಬಗ್ಗೆ ಗೌರವವಿದೆ . ಈ ಬಗ್ಗೆ ಅವರನ್ನು ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಸನ್ಮಾನಿಸಬಹುದಾಗಿದೆ.

ಕವಿ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿರುತ್ತಾರೆ ಎಂಬುದಾಗಿ ಬಾನು ಮುಷ್ತಾಕ್ ರವರು ಸಮರ್ಥನೆ ಮಾಡುತ್ತಿರುವುದು ನಾಡ ಹಬ್ಬ ದಸರಾ ಭಕ್ತರಿಗೆ ಮಾಡಿದ ಅವಮಾನವಾಗಿದೆ . ಅಂದರೆ ನಿಸಾರ್ ಅಹಮದ್ ರವರು ತನ್ನ ಗೀತೆಗಳಲ್ಲಿ ಕನ್ನಡ ನಾಡು-ನುಡಿ ಹಾಗೂ ಭುವನೇಶ್ವರಿಯನ್ನು ಕೊಂಡಾಡಿರುವುದು ನಾಡ ಭಕ್ತಿಗೆ ನೀಡಿದ ಗೌರವವಾಗಿದೆ. ನಾಡಿನ ಜನತೆಯ ಗೌರವಕ್ಕೆ ಬಾನು ಮುಷ್ತಾಕ್ ಸ್ವ-ಪ್ರೇರಣೆಯಿಂದ ಉದ್ಘಾಟನೆಯಿಂದ ಹಿಂದೆ ಸರಿಯುವುದೇ ಸೂಕ್ತ.

ಐತಿಹಾಸಿಕ ನಾಡಹಬ್ಬ ಉದ್ಘಾಟನೆಯ ವ್ಯಕ್ತಿಯ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ನಾಡ ಪ್ರೇಮಿಗಳು ಮತ್ತು ಚಾಮುಂಡೇಶ್ವರಿಯ ಭಕ್ತರು ಆಕ್ರೋಶ , ವಿರೋಧ ವ್ಯಕ್ತಪಡಿಸುತ್ತಿರುವಾಗ ಸಂಘರ್ಷದ ಗೊಂದಲಗಳಿಗೆ ಅಂತ್ಯ ಕಾಣಲು ಬಾನು ಮುಷ್ತಾಕ್ ರವರೇ ಸ್ವಯಂ ಪ್ರೇರಿತವಾಗಿ ಗೌರವದಿಂದ ಉದ್ಘಾಟನೆಯ ಬೇಡಿಕೆಯನ್ನು ತಿರಸ್ಕರಿಸಿ ಹಿಂದಕ್ಕೆ ಸರಿದು ತನ್ನ ಗೌರವವನ್ನು ಹೆಚ್ಚಿಸಿಕೊಳ್ಳುವುದೇ ಸೂಕ್ತ. ಈ ಎಲ್ಲಾ ಹಿನ್ನಲೆಯಲ್ಲಿ ತಕ್ಷಣದಿಂದಲೇ ದಸರಾ ಉದ್ಘಾಟಕರಾಗಿರುವ ಬಾನು ಮುಷ್ತಾಕ್ ರವನ್ನು ಬದಲಾವಣೆ ಮಾಡುವುದರೊಂದಿಗೆ ನಾಡ ಹಬ್ಬ ದಸರಾ ಉದ್ಘಾಟನೆಯ ಗೊಂದಲಕ್ಕೆ ತೆರೆ ಎಳೆಯಲು ಈ ಮೂಲಕ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *