Breaking
22 Mar 2026, Sun

ಕುಂದಾಪುರದಲ್ಲಿ ವ್ಯಕ್ತಿಯೊಬ್ಬರ ಹನಿ ಟ್ರ್ಯಾಪ್ ಆರೋಪ: 6 ಮಂದಿಯ ಬಂಧನ

ಕುಂದಾಪುರ : ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ವ್ಯಕ್ತಿಗೆ ಹಲ್ಲೆಗೈದು ಸಾವಿರಾರು ರೂಪಾಯಿ ಸುಲಿಗೆ ಮಾಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೈಂದೂರು ನಾವುಂದ ಗ್ರಾಮದ ಸವದ್ ( 28), ಕುಂದಾಪುರ ಗುಲ್ವಾಡಿ ಗ್ರಾಮದ ಸೈಪುಲ್ಲಾ ( 38), ಕುಂದಾಪುರ ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್ ( 36), ಕುಂದಾಪುರ ಕುಂಭಾಶಿ ಗ್ರಾಮದ ಅಬ್ದುಲ್ ಸತ್ತಾರ್ ( 23), ಶಿವಮೊಗ್ಗ ಜಿಲ್ಲೆಯ ಹೊಸನಗರದ ಅಬ್ದುಲ್ ಅಜೀಜ್ ( 26) ಹಾಗೂ ಕುಂದಾಪುರ ಕೋಡಿ ನಿವಾಸಿ ಆಸ್ಮಾ (43) ಎಂಬವರನ್ನು ಬಂಧಿಸಲಾಗಿದೆ.

ಈ ಕುರಿತು ಸಂತ್ರಸ್ತ ಸಂದೀಪ್ ಕುಮಾರ್ ಎಂಬವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,ತನಿಖೆ ಮುಂದುವರೆದಿದೆ.

ಕಳೆದ ಮೂರು ತಿಂಗಳ ಹಿಂದೆ ದೂರುದಾರ ಸಂತ್ರಸ್ತ ಸಂದೀಪ್ ಕುಮಾರ್ ಗೆ ಅಬ್ದುಲ್ ಸವಾದ್ ಎಂಬಾತ ಪರಿಚಯ ಆಗಿದೆ. ಆತ ಆಸ್ಮಾನ ಎಂಬಾಕೆಯ ಪರಿಚಯ ಮಾಡಿಕೊಟ್ಟು ಮೊಬೈಲ್ ಸಂಖ್ಯೆ ನೀಡಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದ ಎನ್ನಲಾಗಿದೆ. ಅದರಂತೆ ಸಂದೀಪ್, ಆರೋಪಿ ಆಸ್ಮಾಳಿಗೆ ಕರೆಮಾಡಿದ್ದರು. ಆಕೆ ಸೆ.2ರಂದು ಸಂಜೆ 6.30ಕ್ಕೆ ಕುಂದಾಪುರದ ಮಲ್ನಾಡ್ ಪೆಟ್ರೋಲ್ ಬಂಕ್ ಬಳಿಯ ಆರ್ ಆರ್ ಪ್ಲಾಝಾ ಬಳಿ ಬರಲು ತಿಳಿಸಿದ್ದಳು.

ಅದರಂತೆ ಸಂದೀಪ್ ಆಟೋ ರಿಕ್ಷಾದಲ್ಲಿ ಅಲ್ಲಿಗೆ ಹೋಗಿದ್ದರು. ಬಳಿಕ ಆರೋಪಿ ಆಸ್ಮಾ ಅವಳ ಮನೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಆಕೆ ಉಳಿದ ಆರೋಪಿಗಳನ್ನು ಕರೆ ಮಾಡಿ ಕರೆಯಿಸಿಕೊಂಡಿದ್ದು, 3 ಲಕ್ಷ ಹಣ ಕೊಟ್ಟು ಹೋಗಬೇಕೆಂದು ಚಾಕು ತೋರಿಸಿ ಹಣ ಕೊಡುವಂತೆ ಬೆದರಿಸಿದ್ದಾರೆ. ಆಗ ಸಂದೀಪ್ ಓಡಿ ಹೋಗಲು ಪ್ರಯತ್ನಿಸಿದಾಗ ಆರೋಪಿಗಳಾದ ಸವದ್, ಸೈಪುಲ್ಲಾ, ಮೊಹಮ್ಮದ್ ನಾಸೀರ್ ಶರೀಫ್ , ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಅಜೀಜ್ ಸೇರಿಕೊಂಡು ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿ ಕೈಯಿಂದ ಹಲ್ಲೆ ಮಾಡಿದ್ದಾರೆ.

ರಾಡ್ ನಿಂದ ಎಡ ಭುಜ ಹಾಗೂ ಬೆನ್ನಿಗೆ ಹೊಡೆದು ಬಳಿಕ ಪ್ಯಾಂಟ್ ಜೇಬಿನಲ್ಲಿದ್ದ 6,200 ರೂಪಾಯಿನ್ನು ಬಲವಂತದಿಂದ ಕಸಿದುಕೊಂಡಿದ್ದಾರೆ. ಅಲ್ಲದೆ, ಇನ್ನೂ ಹಣ ನೀಡುವಂತೆ ಬೆದರಿಸಿದ್ದಾರೆ. ಹಣ ಇಲ್ಲ ಎಂದು ಹೇಳಿದಕ್ಕೆ, ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಹುಗಿದು ಹಾಕುತ್ತೇವೆಂದು ಬೆದರಿಸಿ ಮತ್ತೆ ಕೈಯಿಂದ ಹೊಡೆದಿದ್ದಾರೆ. ಇದಕ್ಕೆ ಹೆದರಿ ಸೈಪುಲ್ಲಾ ಖಾತೆಗೆ 30 ಸಾವಿರ ಹಣ ಹಾಕಿದ್ದಾರೆ. ಆ ಬಳಿಕ ಬಲತ್ಕಾರವಾಗಿ ಎಟಿಎಂ ಕಾರ್ಡ್ ನ್ನು ಕಿತ್ತುಕೊಂಡು ಪಿನ್ ನಂಬ್ರ ಪಡೆದುಕೊಂಡು 40 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಸಂದೀಪ್ ಅವರು ತಾವು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *