ಕೋಟ: ಮನೆಯೊಂದರ ಬಳಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಚಿತ್ರಪಾಡಿ ಗ್ರಾಮದ ಸಾಲಿಗ್ರಾಮದಲ್ಲಿ ನಡೆದಿದೆ.
ಸೆ. 02 ರಂದು ತಡರಾತ್ರಿ 1 ಗಂಟೆಗೆ ಕೋಟ ಠಾಣಾ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಇಸ್ಪೀಟು ಆಡುತ್ತಿದ್ದ ಸ್ಥಳೀಯರಾದ ಸತೀಶ, ರಘು ಸಾಲಿಗ್ರಾಮ, ಚೇತನ ಕಾರ್ಕಡ, ಹರೀಶ, ಜನಾರ್ಧನ ಬಾರ್ಕೂರು, ಸನ್ನಿಧಾನ, ಪ್ರಸಾದ ಹಾಗೂ ನವೀನ ಈ 8 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳಿಂದ ಪೊಲೀಸರು ಆಟಕ್ಕೆ ಬಳಸಿದ ಎಲೆಗಳನ್ನು, ನಗದು 14,130/-, ಬೆಡ್ ಶೀಟ್ -1, ಮೊಬೈಲ್ -7 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



