Breaking
23 Mar 2026, Mon

ಲೈಂಗಿಕ ತೃಷೆಯಿಂದ ಬಾಲಕನನ್ನು ಅಪಹರಿಸಿದ ಮಹಿಳೆ: ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಕಾಸರಗೋಡು: ಹದಿನೇಳರ ಹರೆಯದ ಬಾಲಕನನ್ನು ಕೊಲ್ಲೂರಿಗೆ ಕರೆದೊಯ್ದು ವಸತಿಗೃಹದಲ್ಲಿ ಆತನ ಜತೆಗೆ ತಂಗಿದ್ದ ಮಹಿಳೆಯನ್ನು ಕೇರಳದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳದ ಚೇರ್ತಲ ನಿವಾಸಿ ಹರೆಯದ ವಿವಾಹಿತ ಮಹಿಳೆ ಸನೂಷ (27) ಎಂಬಾಕೆಯು ಲೈಂಗಿಕ ತೃಷೆಯಿಂದ ಬಾಲಕ(17) ನನ್ನು ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

ಎರಡು ದಿನಗಳ ಹಿಂದೆ ಮಹಿಳೆ ಮತ್ತು ಬಾಲಕ ನಾಪತ್ತೆಯಾಗಿದ್ದು, ಪ್ರಯಾಣದ ನಡುವೆ ಎಲ್ಲೂ ಅವರು ತಮ್ಮ ಮೊಬೈಲ್ ಫೋನು ಬಳಸಿರದ ಕಾರಣ ಪೊಲೀಸರಿಗೆ ಅವರ ಸುಳಿವು ಸಿಕ್ಕಿರಲಿಲ್ಲ. ಕೊಲ್ಲೂರು ತಲುಪಿದ ಬಳಿಕ ಮಹಿಳೆಯು ತನ್ನ ಫೋನಿನಿಂದ ಗೆಳತಿಗೆ ಸಂದೇಶ ಕಳುಹಿಸಿದ್ದು, ಈ ಸುಳಿವಿನ ಆಧಾರದಲ್ಲಿ ಕೊಲ್ಲೂರು ವಸತಿಗೃಹದಲ್ಲಿ ಪೊಲೀಸರು ಅವರನ್ನು ಪತ್ತೆ ಹಚ್ಚಿದ್ದಾರೆ.

ಮಹಿಳೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು , ಆಕೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *