Breaking
22 Mar 2026, Sun

ಅಂಬಲಪಾಡಿಯಲ್ಲಿ ಟ್ರಕ್ ಮೈಮೇಲೆ ಹರಿದು ಬೈಕ್ ಸವಾರ ಸಾವು

ಉಡುಪಿ: ಟ್ರಕ್ ಹರಿದು ಬೈಕ್ ಸವಾರ ಮೃತಪಟ್ಟ ಘಟನೆ ಉಡುಪಿ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಸೆ.1 ರಂದು ಸಂಜೆ ನಡೆದಿದೆ.

ಮೃತ ಸವಾರನನ್ನು ದೆಂದೂರು ಕಟ್ಟೆಯ ಪ್ರದೀಪ (38) ಎಂದು ಗುರುತಿಸಲಾಗಿದೆ.

ಇವರು ಅಂಬಲಪಾಡಿ ಸುರಭಿ ಅಟೋಮೊಬೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಪ್ರದೀಪ ಅವರ ತಲೆ ಭಾಗವು ಛಿದ್ರಗೊಂಡಿದ್ದು ಅಪಘಾತ ಸ್ಥಳದಿಂದ ಸುಮಾರು ನೂರು ಮೀಟರ್ ದೂರದವರಗೆ ಟ್ರಕ್ ಎಳೆದುಕೊಂಡು ಹೋಗಿದೆ.

ಸಂಚಾರಿ ಪೋಲಿಸ್ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಸಹಕರಿಸಿದರು.

Leave a Reply

Your email address will not be published. Required fields are marked *