Breaking
23 Mar 2026, Mon

ಮಂಗಳೂರಿನಲ್ಲಿ ಅಪರಿಚಿತನಿಂದ ರಿಕ್ಷಾ ಚಾಲಕನಿಗೆ ಇರಿತ: ಪ್ರಕರಣ ದಾಖಲು

ಮಂಗಳೂರು : ಆಟೋ ಚಾಲಕನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಆ.31ರಂದು ಮಂಗಳೂರಿನಲ್ಲಿ ನಡೆದಿದೆ.

ಹಲ್ಲೆಗೊಳಗಾದ ರಿಕ್ಷಾ ಚಾಲಕನನ್ನು ಬಶೀರ್ ಎಂದು ಗುರುತಿಸಲಾಗಿದೆ.

ಆಟೋ ಚಾಲಕ ಬಶೀರ್ ಎಂಬಾತ ರಸ್ತೆ ಬದಿಯಲ್ಲಿ ಆಟೋ ನಿಲ್ಲಿಸಿದ್ದ. ಈ ವೇಳೆ, ಅಪರಿಚಿತ ವ್ಯಕ್ತಿಯೋರ್ವ ಆಟೋ ಅಡ್ಡಗಟ್ಟಿ ಬ್ಯಾರಿ ಭಾಷೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡ್ತೀಯಲ್ವಾ, ನಿನ್ನನ್ನು ಹಾಗೆಯೇ ಬಿಡಲ್ಲ ಎಂದು ಹೇಳಿ ಹಲ್ಲೆ ಮಾಡಿದ್ದಾನೆ. ಇಬ್ಬರೂ ಹೊಡೆದಾಡಿಕೊಂಡಿದ್ದು ಆಟೋ ಚಾಲಕ ಬಶೀರ್ ಹೊಟ್ಟೆಗೆ ಸಣ್ಣ ಗಾಯವಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಪ್ರತಿಯಾಗಿ ಆಟೋ ಚಾಲಕ ಕೂಡ ಆತನಿಗೆ ಹೊಡೆದಿದ್ದು ಅಪರಿಚಿತ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *