ಬಂಟ್ವಾಳ: ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣರ್ಥವಾಗಿ ಸಾಮೂಹಿಕ ಮಂತ್ರ ಪಠಣ, ಶ್ರೀ ರುದ್ರ ಸೂಕ್ತ, ಶ್ರೀ ದೇವಿ ಸೂಕ್ತ ಶ್ರೀ ಸೌರ ಸೂಕ್ತ, ಪುರುಷ ಸೂಕ್ತ ಶ್ರೀ ಅಂಬ್ರಿಣಿ ಸೂಕ್ತ ಶ್ರೀ ಸ್ವಸ್ತಿ ಸೂಕ್ತ ಪಠಣ ನಡೆಯಿತು.

ಈ ವೇಳೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೇವಸ್ಥಾನದ ಅರ್ಚಕರು ಹಾಗೂ ರವಿಶಂಕರ ಮಯ್ಯ ರಮೇಶ್ ರಾವ್ ಜಯಪ್ರಕಾಶ್ ಮಯ್ಯ ರಾಮಚಂದ್ರಮಯ್ಯ ಪಾಲ್ಗೊಂಡರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ತುಂಬೆ ಸದಸ್ಯರಾದ ಜೀವನ ಆಳ್ವ , ಪ್ರಕಾಶ್ ಶೆಟ್ಟಿ ಶ್ರೀಶೈಲ ಮೊದಲಾದವರು ಉಪಸ್ಥಿತರಿದ್ದರು.



