ಬೆಳ್ತಂಗಡಿ: ತಾಲೂಕಿನ ಮೈರೋಳ್ತಡ್ಕ ವಠಾರ ದಲ್ಲಿ ಆಗಸ್ಟ್ 27 ರಂದು ಅನಂತರಾಮ ಶಬರಾಯರವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಈ ಸಂದರ್ಭ ಶಾಸಕರಾದ ಹರೀಶ್ ಪೂಂಜಾ, ಕಿರಣ್ ಚಂದ್ರ ಡಿ ಪುಷ್ಪಗಿರಿ, ಉರುವಾಲು, ಇವರುಗಳು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.


ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶಿವಗೆಳೆಯರ ಬಳಗದ ಅಧ್ಯಕ್ಷರಾದ ಚಂದಪ್ಪ ಗೌಡ ನಡುಮಜಲು ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕರಾದ ಮಾಧವ ಗೌಡ ಧಾರ್ಮಿಕ ಭಾಷಣ ಮಾಡಿದರು,ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪ್ರಗತಿ ಪರ ಕೃಷಿಕರಾದ ಚೆನ್ನಪ್ಪ ಗೌಡ ಪಾಂಜಾಳ ಉಪಸ್ಥಿತರಿದ್ದರು.

ಮುಗೇರಡ್ಕ ನೇತ್ರಾವತಿ ನದಿಕಿನಾರೆಗೆ ಮಕ್ಕಳ ಕುಣಿತ ಭಜನಾ ತಂಡ, ಚೆಂಡೆ ಬಳಗ ದೊಂದಿಗೆ ವೈಭವ ಪೂರ್ಣ ಮೆರವಣಿಗೆಯೊಂದಿಗೆ ಗಣಪನ ಮೂರ್ತಿ ವಿಸರ್ಜನೆಗೊಂಡಿತು, ಮೈರೋಳ್ತಡ್ಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಶ್ರೀ ರಾಮದರ್ಶನ ಯಕ್ಷಗಾನ ಬಯಲಾಟ ನಡೆಯಿತು.

ಭಕ್ತವೃಂದದ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.



