Breaking
22 Mar 2026, Sun

ಕುಂಟಲ್ಪಾಡಿಯ ಕೊಲೆ ಪ್ರಕರಣ ಬೇಧಿಸಿದ ಕಾರ್ಕಳ ಠಾಣೆಯ ಪೊಲೀಸರು

ಕಾರ್ಕಳ: ತಾಲೂಕಿನ ಕುಂಟಲ್ಪಾಡಿಯಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರೀಕ್ಷಿತ್ ಸಂಜೀವ್ ಗೌಡ ಬಂಧಿತ ಆರೋಪಿಯಾಗಿದ್ದು, ನವೀನ್ ಪೂಜಾರಿ ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಆರೋಪಿಗೂ ಕೊಲೆಯಾದ ವ್ಯಕ್ತಿಗೂ ಈ ಮೊದಲು ಪರಿಚಯ ಇತ್ತು. ಇಬ್ಬರೂ ವಿವಾಹಿತರಾಗಿದ್ದು ಬೇರೆ ಬೇರೆ ಕಾರಣಗಳಿಂದ ಪತ್ನಿಯೊಂದಿಗೆ ಮುನಿಸಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಈ ಮಧ್ಯೆ ಆರೋಪಿಯಾಗಿರುವ ಪರೀಕ್ಷಿತ್ ಸಂಜೀವ್ ಗೌಡನ ಗೆಳತಿಯೊಂದಿಗೆ ಕೊಲೆಯಾದ ನವೀನ್ ಪೂಜಾರಿ ಪರಿಚಯ ಮಾಡಿಕೊಂಡಿದ್ದು ಇತ್ತೀಚೆಗೆ ಆತ್ಮೀಯತೆ ಬೆಳೆದಿದೆ.

ಅವರಿಬ್ಬರು ಮತ್ತಷ್ಟು ಕ್ಲೋಸ್ ಆಗುತ್ತಿರುವುದನ್ನು ಸಹಿಸದ ಆರೋಪಿ ರಾತ್ರಿ ವೇಳೆ ಇರಿದು ಕೊಂಡಿದ್ದಾನೆ ಎನ್ನಲಾಗಿದೆ.

ಸದ್ಯ ಆರೋಪಿಯನ್ನು ಬಂಧಿಸಿದ್ದು, ಈ ಸಂಬಂಧ ಸಾಕ್ಷ್ಯಗಳನ್ನು ಕಲೆಹಾಕಿ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *