Breaking
21 Jun 2026, Sun

ಅನನ್ಯ ಭಟ್ ನಾಪತ್ತೆ 3ನೇ ದಿನದ ವಿಚಾರಣೆಗೆ ಸುಜಾತ ಭಟ್ ಹಾಜರ್

ಬೆಳ್ತಂಗಡಿ: ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ 3ನೇ ದಿನದ ವಿಚಾರಣೆಗೆ ಸುಜಾತ ಭಟ್ ಅವರು ಇಂದು ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.

ಬುಧವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9:30 ರವರೆಗೆ ಸುಜಾತ ಭಟ್ ಅವರ 2ನೇ ದಿನದ ವಿಚಾರಣೆ ನಡೆದಿತ್ತು.

2 ದಿನದ ವಿಚಾರಣೆಯ ವೇಳೆ ಎಸ್.ಐ.ಟಿ. ತಂಡ ಪ್ರಶ್ನೆಗಳ ಸುರಿಮಳೆಗೈದಿದ್ದು ಇದರಿಂದ ಬೇಸತ್ತ ಸುಜಾತ ಭಟ್ ಅವರು ದೂರು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದಕ್ಕೆ ಒಪ್ಪದ ಎಸ್ಐಟಿ ವಿಚಾರಣೆ ನಡೆಸಿ, ಹೇಳಿಕೆ ಪಡೆಯುತ್ತಿದೆ.

ಇನ್ನು ವಿಚಾರಣೆ ವೇಳೆ ಅಧಿಕಾರಿಗಳು ಸುಜಾತ ಭಟ್ ಅವರು ಸುಳ್ಳು ಪ್ರಕರಣ ದಾಖಲಿಸಿರುವ ಉದ್ದೇಶ, ಇದಕ್ಕೆ ಪ್ರೇರಣೆ, ಸಹಕರಿಸದವರ ಮಾಹಿತಿ, ಆದಾಯ, ಆಶ್ರಯ, ಪೂರ್ವಾಪರ ಕುರಿತು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *