Breaking
22 Mar 2026, Sun

ಕಾರ್ಕಳದಲ್ಲಿ ಬಡ್ಡಿ ವ್ಯಾಪಾರಿಯ ಬರ್ಬರ ಹತ್ಯೆ: ಪ್ರಕರಣ ದಾಖಲು

ಕಾರ್ಕಳ: ತಾಲೂಕಿನ ಕುಂಟಲ್ಪಾಡಿಯಲ್ಲಿ ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಆ.25ರಂದು ನಡೆದಿದೆ.

ಹತ್ಯೆಯಾದವರನ್ನು ಮಂಗಳೂರು ನಿವಾಸಿ ನವೀನ್ ಎಂದು ಗುರುತಿಸಲಾಗಿದೆ. ಇವರು ಕಾರ್ಕಳ ನಗರದ ಬಾಲಾಜಿ ಆರ್ಕೇಡ್ ನಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಮಂಗಳವಾರ ನಸುಕಿನ ಜಾವ ಸ್ಥಳೀಯರಿಗೆ ಈ ಮಾಹಿತಿ ಲಭ್ಯವಾಗಿದ್ದು, ತಕ್ಷಣವೇ ಪೊಲೀಸರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *