Breaking
22 Mar 2026, Sun

ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ

ಬಂಟ್ವಾಳ : ಕುದನೆ ವಾಸುಕೀವನ ಧರ್ಮಚಾವಡಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ಪ್ರಯುಕ್ತ ವಿವಿಧ ಪೂಜಾಕೈಂಕರ್ಯಗಳು, ದೈವಗಳಿಗೆ ಗಗ್ಗರಸೇವೆ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ನಾಗದೇವರಿಗೆ ‘ಆಶ್ಲೇಷ ಬಲಿ ಪೂಜೆ’ಪರಿವಾರ ದೈವಗಳಿಗೆ ಪರ್ವ ಸೇವೆ,
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನೆರವೇರಿತು. ಸಂಜೆ ಅಣ್ಣಪ್ಪ ಪಂಜುರ್ಲಿ ದೈವದ ಭಂಡಾರ ಇಳಿದು ದೈವದ ‘ಗಗ್ಗರ ಸೇವೆ’ ನಡೆಯಿತು.

ಈ ವೇಳೆ ಕ್ಷೇತ್ರದ ಶ್ರೀವರದರಾಜ್ ವಾಸುಕೀವನ, ಶ್ರೀ ಗುರುದತ್ತ ವಾಸುಕೀವನ, ಶ್ರೀ ಗುರುಮೂರ್ತಿ ನಂದಿಗಮ್, ಉದ್ಯಮಿ ಉಮಾಶಂಕರ್ ಬೆಂಗಳೂರು ಸಹಿತ ಹಲವಾರು ಗಣ್ಯರು ,ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *