ಬಂಟ್ವಾಳ: ಸಜೀಪಮುನ್ನೂರು ಯುವಕ ಸಂಘ (ರಿ.) ಕಂದೂರು ಸಜೀಪಮೂಡ ಇದರ ವತಿಯಿಂದ 52ನೇ ವರ್ಷದ ಸಂಭ್ರಮದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ. 27 ರಿಂದ 29 ರವರೆಗೆ ಕಂದೂರು ಸಜೀಪಮೂಡ ಸಂಘದ ಕಟ್ಟಡದಲ್ಲಿ ಜರುಗಲಿದೆ.

ಆ. 27 ನೇ ಬುಧವಾರದಂದು ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ ಪೂಜೆ, ಗಣಪತಿ ಹೋಮ, ಭಜನೆ ನಡೆಯಲಿದ್ದು, ಮಧ್ಯಾಹ್ನ 1.00ಗಂಟೆಗೆ ಮಹಾಪೂಜೆ ನಂತರ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8.00 ಗಂಟೆಗೆ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಯಕ್ಷಗಾನ ಕಲಾ ತಂಡ, ನಂದಾವರ ಮತ್ತು ಶ್ರೀ ಕಟೀಲು ಮೇಳದ ಆಯ್ದ ಕಲಾವಿದರಿಂದ ‘ ಕದಂಬ ಕೌಶಿಕೆ ‘ ಕಾಲಮಿತಿ ಪೌರಾಣಿಕ ಯಕ್ಷಗಾನ ಬಯಲಾಟವು ಪ್ರದರ್ಶನಗೊಳ್ಳಲಿದೆ.

ಆ. 28 ರಂದು 48 ತೆಂಗಿನಕಾಯಿ ಗಣಪತಿ ಯಾಗ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ನೃತ್ಯ ಕಾರ್ಯಕ್ರಮವು ನಡೆಯಲಿದ್ದು, ರಾತ್ರಿ 8.30 ಕ್ಕೆ ಚಾ ಪರ್ಕ ಕಲಾವಿದೆರ್ ಕುಡ್ಲ ಅಭಿನಯಿಸುವ ಏರ್ಲಾ ಗ್ಯಾರಂಟಿ ಅತ್ತ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಆ. 29 ರಂದು ಗಣಪತಿ ಹೋಮ, ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಸಂಜೆ 4.30 ಕ್ಕೆ ವಿಸರ್ಜನಾ ಮಹಾಪೂಜೆ ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ಗಣೇಶನ ಭವ್ಯ ಶೋಭಾಯಾತ್ರೆ ಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



