Breaking
22 Mar 2026, Sun

ಹಾಸನ: ರೀಲ್ಸ್ ಹುಚ್ಚಿಗೆ ಯುವಕ ಬಲಿ

ಹಾಸನ: ರೀಲ್ಸ್ ಹುಚ್ಚಿಗೆ ಯುವಕ ಬಲಿಯಾದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಬ್ಬಳ್ಳಿಗೆರೆ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು ವಿ.ಜಿ. ಕೊಪ್ಪಲು ಗ್ರಾಮದ ನಿವಾಸಿ ಕಿರಣ್(19) ಎಂದು ಗುರುತಿಸಲಾಗಿದೆ.

ಈತ ರೀಲ್ಸ್ ಮಾಡುವುದಕ್ಕೆಂದು ಕಡಿದಾದ ಇಳಿಜಾರಿನ ತಿರುವಿನಲ್ಲಿ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿದ ಪರಿಣಾಮ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಂತರ ಅದರಡಿಗೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *