Breaking
22 Mar 2026, Sun

ಬಂಟ್ವಾಳ: ಶಾಲಾ ಬಸ್‌ಗೆ ಖಾಸಗಿ ಬಸ್ ಢಿಕ್ಕಿ; ವಿದ್ಯಾರ್ಥಿಗಳು ಪಾರು

ಬಂಟ್ವಾಳ: ಶಾಲಾ ಬಸ್‌ಗೆ ಖಾಸಗಿ ಬಸ್ಸೊಂದು ಹಿಂದಿನಿಂದ ಢಿಕ್ಕಿ ಹೊಡೆದಿದ್ದು, ವಿದ್ಯಾರ್ಥಿಗಳು ಅಪಾಯದಿಂದ ಪಾರಾದ ಘಟನೆ ಪುಣಚದ ಮಲ್ಲಿಕಟ್ಟೆ ಎಂಬಲ್ಲಿ ಆ.20ರ ಬೆಳಗ್ಗೆ ಸಂಭವಿಸಿದೆ.

ಶಾಲಾ ಬಸ್ ಪುಣಚದಿಂದ ಪುತ್ತೂರು ಕಡೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ತೆರಳುತ್ತಿತ್ತು. ಈ ವೇಳೆ ಶಾಲಾ ಬಸ್‌ಗೆ ಪುಣಚದ ಮಲ್ಲಿಕಟ್ಟೆ ತಿರುವಿನಲ್ಲಿ ಹಿಂದಿನಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಖಾಸಗಿ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು , ಅದೃಷ್ಟವಶಾತ್‌ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *