ಬೆಳ್ತಂಗಡಿ: ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಆ. 15ರಂದು ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಕೊಡುಗೆಯಾಗಿ ನೀಡಿದಂತಹ ನೂತನ ಧ್ವಜಸ್ತಂಭ, ಇಂಟರ್ ಲಾಕ್ ವ್ಯವಸ್ಥೆಯ ಹಸ್ತಾಂತರ ಕಾರ್ಯಕ್ರಮ ಜರುಗಿತು.

ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಕೆ ಸ್ವಾಗತಿಸಿ ಹಳೆ ವಿದ್ಯಾರ್ಥಿ ಸಂಘಕ್ಕೆ ಶಾಲೆಯ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸಿದರು.

ಈ ಸಂದರ್ಭ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಗೌಡ ಮತ್ತು ಪದಾಧಿಕಾರಿ ದಿನೇಶ್ ಅಡ್ಡಾರು, ಲಕ್ಷ್ಮಿಕಾಂತ್ ಕೀಲಾರು, ಹರೀಶ್ ಕೋಡಿಮಜಲು, ನವೀನ್ ಪ್ರಕಾಶ್, ತಿರುಮಲೇಶ್ , ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮಹಾಬಲ ಗೌಡ, ಸದಸ್ಯರಾದ ಶ್ರೀನಿವಾಸ ಗೌಡ, ಕವಿತಾ, ಶ್ಯಾಮಲಾ, ಶಶಿಧರ ಗೌಡ ಹಾಗೂ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.



