ಮನೆಯಲ್ಲೇ ನೇಣು ಬಿಗಿದು ಯುವತಿ ಆತ್ಮಹತ್ಯೆ

ಪುತ್ತೂರು : ಬನ್ನೂರು ಗ್ರಾಮದ ಕನಡ್ಕ ಎಂಬಲ್ಲಿ ಯುವತಿಯೊಬ್ಬಳು ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.17 ರಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿ ಕನಡ್ಕ ನಿವಾಸಿ, ಡೊಂಬಯ್ಯ ಕುಲಾಲ್ ಎಂಬವರ ಪುತ್ರಿ ತೇಜಸ್ವಿನಿ ( 22ವ) ಎಂದು ಗುರುತಿಸಲಾಗಿದೆ.

ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಮೃತರು ತಂದೆ, ತಾಯಿ ಮತ್ತು ಸಹೋದರನನು ಅಗಲಿದಾರೆ.

Leave a Reply

Your email address will not be published. Required fields are marked *