ಎಲ್ಲಕಿಂತ ದೊಡ್ಡದು ಮಾನವೀಯತೆ ಎಂಬಂತೆ ಇಲ್ಲೊಬ್ಬ ಯುವಕ ಕಳೆದು ಕೊಂಡ ಹಣವನ್ನು ಹಿಂತಿರುಗಿಸಿ ಮಾನವೀಯತೆಯನ್ನು ಮೆರೆದು ಎಲ್ಲರ ಪ್ರಶಂಶೆಗೆ ಪಾತ್ರರಾಗಿದ್ದಾರೆ.
ಸಿದ್ದಕಟ್ಟೆ ಸಮೀಪದ ನಯರ ಪೆಟ್ರೋಲ್ ಪಂಪ್ ಬಳಿ ಸಿದ್ದಕಟ್ಟೆ ಮಹಿಳೆಯೋರ್ವರ ಒಂದು ಲಕ್ಷ ರೂಪಾಯಿ ಹಾಗೂ ಅನೇಕ ಅಗತ್ಯ ದಾಖಲೆಗಳಿದ್ದ ಬ್ಯಾಗ್ ಗರ್ಡಾಡಿಯ ಯುವಕ ವರುಣ್ ಎಂಬವರಿಗೆ ಸಿಕ್ಕಿದ್ದು, ತಕ್ಷಣವೇ ದೂರವಾಣಿಯ ಮೂಲಕ ಅವರನ್ನು ಸಂಪರ್ಕಿಸಿ ಭೇಟಿ ಮಾಡಿ ಬ್ಯಾಗ್ ನ್ನು ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.