Breaking
23 Dec 2024, Mon

400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಯಿಂದ ಸಹಾಯಕ ಆಯುಕ್ತ ರಿಗೆ ಮನವಿ

ವಿಟ್ಲ: ಉಡುಪಿ – ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗದಿಂದ ಅಡಕೆ, ತೆಂಗು, ರಬ್ಬರ್, ಗೇರು ಕೃಷಿಗೆ ಹಾನಿಯಾಗುವ ಬಗ್ಗೆ ನೋಡಲ್ ಅಧಿಕಾರಿಯಾಗಿರುವ ಸಹಾಯಕ ಆಯುಕ್ತ ಹರ್ಷವರ್ಧನ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಯಿಂದ ಮನವಿ ನೀಡಲಾಯಿತು.


ವಿದ್ಯುತ್ ಮಾರ್ಗ ಸುಮಾರು ೪೦ಕ್ಕೂ ಅಧಿಕ ಬಡವರ ಮನೆಯ ಮೇಲೆ ಹಾದುಹೋಗುವ ಸಂಭವವಿದ್ದು, ಪರ್ಯಾಯ ವ್ಯವಸ್ಥೆಯಿಲ್ಲದೇ ಕುಟುಂಬ ಬೀದಿಗೆ ಬೀಳುವ ಸಾಧ್ಯತೆಯಿದೆ. ವಿದ್ಯುತ್ ಮಾರ್ಗದಿಂದ ಹೊರಸೂಸುವ ಎಲೆಕ್ಟ್ರೋಮ್ಯಾಗ್ನೇಟಿಕ್ ಪವರ್ ನಿಂದ ಸುಮಾರು ೨ ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಬಗ್ಗೆ ತಮಿಳುನಾಡು ಭಾಗದಲ್ಲಿ ವೈಜ್ಞಾನಿಕವಾಗಿ ಕಂಡುಕೊಂಡಿದ್ದಾರೆ. ಉಡುಪಿಯಿಂದ ಸಾರಡ್ಕವರೆಗಿನ ಕೃಷಿ ಜಮೀನಿಗೆ ಕಂಪನಿಯವರು ಕಾಲು ಇಡದ ರೀತಿಯಲ್ಲಿ ನೋಡಿ ಕೊಳ್ಳಬೇಕು. ಕಾನೂನಿನಲ್ಲಿ ಮಾರ್ಗ ಬದಲಾವಣೆಯ ಅವಕಾಶವನ್ನು ನೀಡಲಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಮನವರಿಕೆ ಮಾಡಬೇಕೆಂಬ ಬೇಡಿಕೆಯನ್ನು ಸಲ್ಲಿಸಲಾಯಿತು.


ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, ೪೦೦ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಸಂತ್ರಸ್ತ ರೈತ ಶ್ಯಾಮ್ ಪ್ರಸಾದ್ ವನಭೋಜನ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *