ಬಂಟ್ವಾಳ: ಪಾಣೆಮಂಗಳೂರು ನಿವಾಸಿ, ಜ್ಯೊತಿ ಬೀಡಿ ಸಂಸ್ಥೆ ಮಾಲೀಕ, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘ ದ ಅಧ್ಯಕ್ಷ ಬಿ.ರಘು ಸಪಲ್ಯ(76) ಶುಕ್ರವಾರ ಮುಂಜಾನೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರು ಇದ್ದಾರೆ. ಆರ್ ಎಸ್ ಎಸ್ ಹಿರಿಯ ಕಾರ್ಯ ಕರ್ತರಾಗಿ, ವೃತ್ತಿಯಲ್ಲಿ ಟೈಲರ್ ಆಗಿ, ತುರ್ತು ಪರಿಸ್ಥಿತಿ ವಿರುದ್ದ ಹೋರಾಟಗಾರರಾಗಿ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿ, ನೂರಾರು ಮಂದಿಗೆ ಉದ್ಯೋಗದಾತರಾಗಿ, ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನ, ನರಿಕೊಂಬು ನಾಲ್ಕೈತ್ತಾಯ ದೈವಸ್ಥಾನ, ಶಂಭೂರು ಶ್ರೀ ವೀರಭದ್ರ ದೇವಸ್ಥಾನ, ಪಾಣೆಮಂಗಳೂರು ಶ್ರೀ ಸತ್ಯದೇವತಾ ಗುಡಿ, ಮೆಲ್ಕಾರ್ ನಾಗಸನ್ನಿಧಿ, ಬಜಗೋಳಿ ಧರ್ಮದೇವಿ ದೇವಸ್ಥಾನ, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಶ್ರೀ ಧರ್ಮರಸು ಕ್ಷೇತ್ರ, ವಗ್ಗ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದಲ್ಲಿ ವಿಶೇಷ ಕೊಡುಗೆ ಸಲ್ಲಿಸಿದ್ದರು.
ಮೃತರ ಅಂತ್ಯಕ್ರಿಯೆ ಮಧ್ಯಾಹ್ನ 3.30ಕ್ಕೆ ಸ್ವಗೃಹ ಬಳಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.