Breaking
20 Sep 2026, Sun

ಎಕ್ಸ್‌ಪ್ರೆಸ್ ಬಸ್ ಸ್ಕೂಟರ್ ಗೆ ಡಿಕ್ಕಿ : ಸ್ಕೂಟರ್‌ ಸವಾರ ಸಾವು

ಉಡುಪಿ: ಹೆಜಮಾಡಿ ಹಳೆಯ ಎನ್‌ಬಿಸಿ ರಸ್ತೆಯ ಬಳಿ ಎಕ್ಸ್‌ಪ್ರೆಸ್ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ಜು.08 ರಂದು ನಡೆದಿದೆ.

ಮೃತಪಟ್ಟವರನ್ನು ಹೆಜಮಾಡಿ ಕೋಡಿ ಮಾನಂಪಾಡಿಯ ನಿವಾಸಿ ತುಷಾರ್ (20) ಎಂದು ಗುರುತಿಸಲಾಗಿದೆ.

ತುಷಾರ್ ಸ್ಕೂಟರ್‌ನಲ್ಲಿ ಕೆಲಸದ ನಿಮಿತ್ತ ಮುಲ್ಕಿಯ ಕಡೆಯ ಹೆದ್ದಾರಿ ದಾಟಲು ಪ್ರಯತ್ನಿಸುತ್ತಿದ್ದ ವೇಳೆ ಮಂಗಳೂರಿನಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತುಷಾರ್ ಅವರ ತಲೆ ಮತ್ತು ಎದೆಗೆ ತೀವ್ರವಾಗಿ ಗಾಯಗಳಾಗಿದ್ದು , ತಕ್ಷಣವೇ ಹೆಜಮಾಡಿ ಟೋಲ್ ಆಂಬ್ಯುಲೆನ್ಸ್ ಮೂಲಕ ಅವರನ್ನು ಮುಕ್ಕಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ತುಷಾರ್ ಅವರು ಹೊಸ ಮಂಗಳೂರು ಬಂದರಿನಲ್ಲಿರುವ ಪ್ರಾಜೆಕ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ತಾಯಿ ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ.

ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *