Breaking
23 Dec 2024, Mon

ಆನಂದತೀರ್ಥ ವಿದ್ಯಾಲಯದಲ್ಲಿ ಅಜ್ಜ ಅಜ್ಜಿಯರ ದಿನ

ಕಟಪಾಡಿ: ಪ್ರತಿಯೊಂದರಲ್ಲೂ ಹೊಸತನವನ್ನು ಹುಡುಕುವ,
ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿ ಕೊಡುವ
ಭಾರತೀಯತೆಯೊಂದಿಗೆ ಶೈಕ್ಷಣಿಕ ಚಟುವಟಿಕೆ ನಡೆಸುವ
ಜಿಲ್ಲೆಯಲ್ಲಿಯೇ ಹಸರುವಾಸಿಯಾಗಿರುವ, ಉಡುಪಿ ಪೇಜಾವರ ಮಠದ
ಆಡಳಿತಕ್ಕೊಳಪಟ್ಟ, ಪಾಜಕ ಆನಂದತೀರ್ಥ ವಿದ್ಯಾಲಯದಲ್ಲಿ ಅಜ್ಜ
ಅಜ್ಜಿಯರಿಗೆ ವಿವಿಧ ಮನೋರಂಜನಾ ಸಾಂಸ್ಕೃತಿಕ ಚಟುವಟಿಕೆ
ನಡೆಸುವ ಮೂಲಕ ಅವರ ಮನದಲ್ಲಿ ಬಾಲ್ಯದ ತಮ್ಮ
ನೆನಪುಗಳ ಬುತ್ತಿಯನ್ನು ತೆರೆಯುವಂತೆ ಮಾಡುವ ವೇದಿಕೆ
ನಿರ್ಮಾಣ ಮಾಡಿಕೊಡಲಾಗಿತ್ತು. ತಮ್ಮದೇ ಮೊಮ್ಮಕ್ಕಳ ಮರಿ
ಮಕ್ಕಳ ಮನೋರಂಜನಾ ಕಾರ್ಯಕ್ರಮ ನೋಡಿ
ಮಕ್ಕಳೊಂದಿಗೆ ಮಕ್ಕಳಾಗಿ, ತಾವೂ ಕುಣಿದು ಆಟ ಆಡಿ
ಪುಟಾಣಿಗಳೊಂದಿಗೆ ಸಂತಸ ಪಟ್ಟರು.


ತಮ್ಮ ಬಾಲ್ಯದ ನೆನಪುಗಳ ಸರಮಾಲೆಯನ್ನು ಮನದಲ್ಲಿ
ಮಡುಗಟ್ಟಿಸಿಕೊಂಡು ಮನೆಯಲ್ಲಿ ಇಡೀ ದಿನ ಕುಳಿತು ತಮ್ಮ
ಮುಸ್ಸಂಜೆ ಜೀವನ ನಡೆಸುತ್ತಿರುವ ಹಿರೀ ಜೀವಗಳಿಗೆ ಇಂತದೊAದು
ಅವಕಾಶ ಮಾಡಿಕ್ಕೊಟ್ಟಿರುವುದು ಅವರಿಗೆ ವಿಶೇಷ
ಸಂತೋಷವನ್ನುಂಟು ಮಾಡಿತ್ತು.


ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ
ಸದಸ್ಯೆ ರೂಪ ಬಲ್ಲಾಳ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ವಯಸ್ಸಿನ ಆಲೋಚನೆಯನ್ನು ಬಿಟ್ಟು ಸಾಧ್ಯವಾದಷ್ಟು ಮನಸ್ಸಿಗೆ
ಸಂತೋಷವಾಗುವ ಚಟುವಟಿಕೆಯಲ್ಲಿ ಪಾಲ್ಗೊಂಡು ಲವಲವಿಕೆಯಿಂದ
ಇದ್ದರೆ ವಯೋಸಹಜ ಕಾಯಿಲೆಯನ್ನು ದೂರ ಮಾಡಬಹುದು
ಎಂದು ಅಭಿಪ್ರಾಯಪಟ್ಟರು.
ಹಿರಿಯ ಪೋಷಕರ ದಿನದ ಮಹತ್ವವನ್ನು ಪ್ರಿನ್ಸಿಪಲ್ ಡಾ. ಗೀತಾ
ಶಶಿದರ್, ಶಿಕ್ಷಕಿ ಸುಮಾ ಕಿರಣ್ ತಮ್ಮ ಅಭಿಪ್ರಾಯ
ಹಂಚಿಕೊಂಡರು.
ಶಿಕ್ಷಕಿಯರಾದ ಸೋನಿಯಾ ಕಾರ್ಯಕ್ರಮ ನಿರೂಪಿಸಿ, ನೀತಾ ಸ್ವಾಗತಿಸಿ,
ದೀಪಾ ವಂದಿಸಿದರು.

Leave a Reply

Your email address will not be published. Required fields are marked *