ಉಪ್ಪಿನಂಗಡಿ: ಹಲವು ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ 5 ವರ್ಷಗಳಿಂದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಕಳ್ಳನನ್ನು ಉಪ್ಪಿನಂಗಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾಸನ ಮೂಲದ, ಮಂಗಳೂರಿನ ತಲಪಾಡಿ ಎಂಬಲ್ಲಿ ವಾಸವಿದ್ದ ಅಕ್ಬರ್ ಸೊಹೈಬ್ (24) ಎಂದು ಗುರುತಿಸಲಾಗಿದೆ. ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಹಾಸನದ ಬಿಟ್ಟಗೌಡನಹಳ್ಳಿ ಎಂಬಲ್ಲಿ ಆಗಸ್ಟ್.4 ರಂದು ಅರೆಸ್ಟ್ ಮಾಡಿದ್ದಾರೆ.

ಈತನ ವಿರುದ್ಧ ಉಪ್ಪಿನಂಗಡಿ, ಬಂಟ್ವಾಳ, ಉಳ್ಳಾಲ ಹಾಗೂ ಕೇರಳದಲ್ಲಿ ವಿವಿಧ ಕಳ್ಳತನ ಪ್ರಕರಣ ದಾಖಲಾಗಿದೆ.



