Breaking
23 Mar 2026, Mon

ಐಕ್ಸ್‌ ಇಂಟರ್‌ ಸ್ಕೂಲ್‌ ಕ್ರಾಸ್‌ ಕಂಟ್ರಿ ಸ್ಪರ್ದೆ, ಆನಂದತೀರ್ಥ ವಿದ್ಯಾಲಯ ರನ್ನರ್ಸ್ ‌

ಕಟಪಾಡಿ: ಐಕ್ಸ್‌ ಇಂಟರ್‌ ಸ್ಕೂಲ್‌ ಕ್ರಾಸ್‌ ಕಂಟ್ರಿ ಸ್ಪರ್ದೆಯು (ಧಾವನಂ) ಆನಂದ ತೀರ್ಥ
ವಿದ್ಯಾಲಯದ ನೇತೃತ್ವದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಸಿ.ಬಿ. ಎಸ್‌.ಇ (ಐಕ್ಸ್) ವಿದ್ಯಾ ಸಂಸ್ಥೆಗಳ ಜಿಲ್ಲಾ ಮಟ್ಟದ ಈ ಸ್ಪರ್ದೆಯಲ್ಲಿ 22 ಶಾಲೆಯ 160 ವಿದ್ಯಾರ್ಥಿಗಳು ಭಾಗವಹಿಸಿದ್ದು, 14 ಮತ್ತು 17 ವಯೋಮಾನದ ಬಾಲಕ ಬಾಲಕೀಯರ ನಾಲ್ಕು ವಿಭಾಗದಲ್ಲಿ ಸ್ಪರ್ದೆ ನಡೆದಿದ್ದು, ಡಾ. ಎನ್‌.ಎಸ್.ಎ.ಎಮ್.ಇ.ಎಮ್‌ ನಿಟ್ಟೆ ಇಲ್ಲಿನ ವಿದ್ಯಾರ್ಥಿಗಳು ಚಾಂಪಿಯನ್‌ ಆಗಿದ್ದರೆ, ದ್ವಿತೀಯ ಸ್ಥಾನಿಯಾಗಿ ಹೊರ ಹೊಮ್ಮಿದ ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳು ರನ್ನರ್ಸ್‌ ಪ್ರಶಸ್ತಿ ಪಡೆದಿರುತ್ತಾರೆ. ಸ್ಪರ್ದೆಯು ಕ್ರಮವಾಗಿ 3, 4, ಮತ್ತು 5 ಕಿಮಿ ದೂರ ನಡೆದಿತ್ತು. ಕ್ರೀಡಾಕೂಟ ಶಾಲಾ ಆಡಳಿತ ಮಂಡಳಿ ಸದಸ್ಯ ಸುದರ್ಶನ್‌ ರಾವ್‌, ರೂಪಾ ಬಲ್ಲಾಳ್‌, ಹಾಗೂ ಪ್ರಿನ್ಸಿಪಲ್‌ ಡಾ.ಗೀತಾ ಶಶಿಧರ್‌ ಹಸಿರು ನಿಶಾನೆ ತೋರಿಸಿದರು. ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ ಪ್ರಿನ್ಸಿಪಲ್‌ ಅನಿತಾ ರಾಜ್‌ ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ, ಆನಂದತೀರ್ಥ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ, ರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ ಓಟಗಾರ ಸಚಿನ್‌ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಠಿಣ ಅಭ್ಯಾಸ ಮಾಡಿ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ.

ಜೀವನದಲ್ಲಿ ಕಠಿಣ ಅಭ್ಯಾಸ ಗುರಿ ಮುಟ್ಟುವ ಹಂಬಲ ವಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು ಸಮಾರಂಭದಲ್ಲಿ ರೂಪಾ ಬಲ್ಲಾಳ್‌, ಪ್ರಿನ್ಸಿಪಲ್‌ ಡಾ. ಗೀತಾ ಶಶಿಧರ್‌, ದೈಹಿಕ ಶಿಕ್ಷಣ ಶಿಕ್ಷಕರಾದ
ಸಂತೋಷ್‌ ಕುಮಾರ್‌ ಶೆಟ್ಟಿ, ಸಚಿನ್‌, ಕಲ್ಮೇಶ್‌, ದುರ್ಗಪ್ಪ, ಆದರ್ಶ್‌, ಮಮತಾ, ಅಮಿತಾ
ಉಪಸ್ಥಿತರಿದ್ದರು. ಶಾಲೆಯ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ನೇತೃತ್ವದಲ್ಲಿ, ಹಾಗೂ ಎಲ್ಲಾ ಅಧ್ಯಾಪಕ
ವೃಂದದವರು, ಶಿಕ್ಷಕೇತರ ಸಿಬ್ಬಂದಿಗಳು, ಹಾಗೂ ಆನಂದತೀರ್ಥ ಪ.ಪೂ ಕಾಲೇಜು ದೈಹಿಕ ಶಿಕ್ಷಣ
ಉಪನ್ಯಾಸಕ ವಕ್ಷತ್‌ ಸಾಲಿಯಾನ್‌ ಇವರ ಸಹಕಾರದಿಂದ ಕ್ರೀಡಾಕೂಟವು ಯಶಸ್ವಿಯಾಗಿ
ನೆರವೇರಿತು.

ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸುವಾಸಿನಿ ಶೆಟ್ಟಿ ನಿರೂಪಿಸಿ, ನೈನಾ ಶೆಟ್ಟಿಗಾರ್‌
ಸ್ವಾಗತಿಸಿ, ಪ್ರತಿಭಾ ಶೆಟ್ಟಿ ವಂದಿಸಿದರು. ಸುಭಾ಼ಷಿಣಿ ಆಚಾರ್ಯ ಅತಿಥಿಗಳ ಪರಿಚಯ ಮಾಡಿದರು.
ದಿನೇಶ್‌ ಬಹುಮಾನಿತರ ಪಟ್ಟಿ ವಾಚಿಸಿದರು.

ಸ್ಥಾನ ವಿಜೇತ ವಿದ್ಯಾರ್ಥಿಗಳ ವಿವರ:
17 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಸಿದ್ಧಿ ಮನೋಜ್‌ ವಾಲ್ವೇಕರ್‌ ತೃತೀಯ, ಬಿ.ಎಸ್‌
ಮನೋಜ್‌ ಚತುರ್ಥ, ಬಾಲಕೀಯರ ವಿಭಾಗದಲ್ಲಿ ಲಕ್ಷ್ಮೀ ವೆಂಕಪ್ಪ ದ್ವಿತೀಯ, ಲಕ್ಷ್ಮೀ ಬಾಯಿ ತೃತೀಯ ಸ್ಥಾನ ಪಡೆದರೆ, 14 ವಯೋಮಾನದ ಬಾಲಕರ ವಿಭಾಗದಲ್ಲಿ ಲಿಖಿತ್ ಮೇಲ್ಲಾಲ್‌ ದ್ವೀತೀಯ, ಬಾಲಕೀಯರ ವಿಭಾಗದಲ್ಲಿ ಪವಿತ್ರ ವೆಂಕಪ್ಪ ಐದನೇ ಸ್ಥಾನ ಪಡೆದರು.

Leave a Reply

Your email address will not be published. Required fields are marked *