ಮೈಸೂರ್: ಪಿ ಜಿ ಆರ್ ಎಸ್ ಎಸ್ ಸಂಸ್ಥೆಯ ಐದನೇಯ ವಾರ್ಷಿಕೋತ್ಸವದ ಸಮಾರಂಭವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಕಮಲ, ಸಮಾಜಸೇವಕಿ ಹಾಗೂ ಪ್ರದಾನ ಕಾರ್ಯದರ್ಶಿ, ಕೆ ಪಿ ಸಿ ಸಿ, ಇವರು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಂಸ್ಥೆಯು ನಾಲ್ಕು ವಸಂತಗಳನ್ನು ಪೂರೈಸಿ ಐದನೇಯ ವರ್ಷಕ್ಕೆ ಕಾಲಿಡುತ್ತಿರುವುದು ಒಂದು ಸಂತೋಷದ ಸಂಗತಿ. ಈ ಸಂಸ್ಥೆಯು ಇನ್ನು ಬೆಳೆಯಲಿ ರಾಜ್ಯಮಟ್ಟದಲ್ಲಿ ಹೆಸರನ್ನು ಸಂಪದಿಸಲಿ ಮತ್ತು ರಾಜ್ಯದ ಜನರಿಗೆ ಸಹಾಯವಾಗಲಿ ಎಂದು ಹಾರೈಸಿದರು.

ಶ್ರೀ ವೈ ಎಲ್ ಚೌಧರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬೆಳಗಾವಿ ಜಿಲ್ಲೆ ಇವರು ಅತಿಥಿಗಳಾಗಿ ಬಾಗವಹಿಸಿ ಮಾತನಾಡಿದರು ಹಾಗೂ ಪಿ ಜಿ ಆರ್ ಎಸ್ ಎಸ್ ಸಂಸ್ಥೆಯ ಔಚಿತ್ಯವು ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ ಪ್ರಸ್ತುತವಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಸತೀಶ, ಉಪಾಧ್ಯಕ್ಷರು ಮಾತನಾಡಿ ಸಂಸ್ಥೆಯ ಚರಿತ್ರೆಯ ಬಗ್ಗೆ ತಿಳಿಸಿದರು. ಶ್ರೀ ಯಾದವ ಹರೀಶ್. ಸಂಸ್ಥಾಪನಾ ಅಧ್ಯಕ್ಷರು, ಮಾತನಾಡಿ ಇಂದಿನ ಕಾಲದಲ್ಲಿ ಸಂಸ್ಥೆಯನ್ನು ನಡೆಸಲು ಬಹಳ ಕಷ್ಟ ಆದರೆ ಹಲವಾರು ಸಮಸ್ಯೆ ಸವಾಲುಗಳ ನಡುವೆಯೂ ಸಂಸ್ಥೆಯು ಬೆಳೆಯುತ್ತಲಿದೆ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಕಾರ್ಯಕಮದಲ್ಲಿ ಶ್ರೀ ಜಯಕುಮಾರ್, ಮನುಗನಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯರು ಇವರು ಉಪಸ್ಥಿತ ರಿದ್ದರು. ಶ್ರೀ ವಿ ರವೀಂದ್ರ, ಕಾರ್ಯದರ್ಶಿ, , ಅಧ್ಯಕ್ಷರ ಶ್ರೀಮತಿ ರಾಜೇಶ್ವರಿ, ರಾಜ್ಯ ಸಂಚಾಲಕರು. ಶ್ರೀ ರಕ್ತದಾನಿ ಮಂಜು, ಸಹ ಕಾರ್ಯದರ್ಶಿ. ಪಲ್ಲವಿ H, ಗೌರವ ಅಧ್ಯಕ್ಷರು.ಎ ಆರ್ ಸವಿತ, ರಾಜ್ಯ ಖಜಾಂಚಿ ಮಂಜುಳಾ s, ವೀರೇಂದ್ರ ಸದಲಗಿ ಸಂಘಟನಾ ಕಾರ್ಯದರ್ಶಿ ಬಾಗಲಕೋಟೆ ಜಿಲ್ಲೆ, ಚೈತ್ರ, ನೇತ್ರಾವತಿ, ಹರಣಿ, ಹರ್ಷ, ಸಮುದಾಯ ಸಂಚಾಲಕರು ಗಳಾದ ಎಲ್ಲ ಮಹಿಳೆಯರು ಬಾಗವಹಿಸಿದ್ದರು.




