Breaking
12 May 2026, Tue

ಕಾಸರಗೋಡು: ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕ ಹಾಗೂ ಹಸು ಮೃತ್ಯು

ಕಾಸರಗೋಡು: ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕ ಹಾಗೂ ಜೊತೆಗಿದ್ದ ಹಸುವು ಮೃತಪಟ್ಟ ಘಟನೆ ಕೋಳಿಯಡ್ಕದ ವಯಳಂಕುಳಿ ಎಂಬಲ್ಲಿ ಜು.28ರಂದು ನಡೆದಿದೆ.

ಮೃತರನ್ನು ವಯಳಂಕಳಿಯ ಕುಞಿಂಡನ್ ನಾಯರ್(75) ಎಂದು ಗುರುತಿಸಲಾಗಿದೆ.

ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಹಸು ಮೇಯಿಸಲು ಮನೆ ಸಮೀಪದ ಬಯಲಿಗೆ ತೆರಳಿದ್ದ ಸಂದರ್ಭದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ತಂದೆ ತಡವಾದರೂ ಮರಳದ ಹಿನ್ನಲೆಯಲ್ಲಿ ಮಗ ರಾಜನ್ ಹುಡುಕಿಕೊಂಡು ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *