Breaking
21 Mar 2026, Sat

ಕಿನ್ನಿಗೋಳಿ: ಬಾವಿಗೆ ಬಿದ್ದು ಚಿರತೆ ಸಾವು

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮದ ಮುಕ್ಕ ರಸ್ತೆ ಸಮೀಪ ರಾಬರ್ಟ್ ಎಂಬವರ ಮನೆಯ ಬಾವಿಗೆ ಚಿರತೆ ಬಿದ್ದು ಮೃತಪಟ್ಟ ಘಟನೆ ಇಂದು(ಜು.28) ಮುಂಜಾನೆ ನಡೆದಿದೆ.

ಬೆಳಿಗ್ಗೆ ರಾಬರ್ಟ್‌ ಪಂಪ್‌ ಆನ್‌ ಮಾಡುವಾಗ ನೀರು ಬಾರದೇ ಇದ್ದುದರಿಂದ ಬಾವಿಗೆ ಇಣುಕಿದಾಗ ಚಿರತೆ ಕಾಣಿಸಿಕೊಂಡಿದೆ. ಇದನ್ನು ಕಂಡು ರಾಬರ್ಟ್‌ ತಕ್ಷಣ ಪಂಪ್ ಬಂದ್ ಮಾಡಿದ್ದಾರೆ. ಚಿರತೆ ಬಾವಿಯಿಂದ ಹೊರಬರಲು ಪಂಪ್ ನ ನೈಲಾನ್ ಹಗ್ಗ ಮತ್ತು ಪಂಪ್ ನ ಪೈಪ್ ಹಿಡಿದು ಮೇಲಕ್ಕೆ ಬರಲು ಪ್ರಯತ್ನಿಸಿದ್ದು, ಈ ವೇಳೆ ಹಗ್ಗ ಮತ್ತು ಪೈಪ್ ತುಂಡಾಗಿದೆ.

ಸ್ವಲ್ಪ ಹೊತ್ತಿನ ಬಳಿಕ ನೋಡಿದಾಗ ಚಿರತೆ ಪಂಪ್ ಗೆ ಅಳವಡಿಸಿದ್ದ ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿ ಮೃತಪಟ್ಟಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಪಶುವೈದ್ಯರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ಧಾರೆ.

Leave a Reply

Your email address will not be published. Required fields are marked *