ಬಂಟ್ವಾಳ : ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವಿಶೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮುಂದಿನ ಎರಡು ವರ್ಷಗಳ ಅವಧಿಗೆ ಭುವನೇಶ್ ಪಚ್ಚಿನಡ್ಕ ಅವರನ್ನು ಅವಿರೋಧವಾಗಿ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಜಯಪ್ರಕಾಶ್ ಜೆ ಎಸ್ ಜಕ್ಕಿಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಜೊತೆ ಕಾರ್ಯದರ್ಶಿಯಾಗಿ ಆನಂದ್ ಸಾಲಿಯಾನ್ ಶಂಭೂರು, ಕೋಶಾಧಿಕಾರಿಯಾಗಿ ಸುನೀಲ್ ಕುಂದರ್ ಮೊಡಂಕಾಪು, ಲೆಕ್ಕ ಪರಿಶೋಧಕರಾಗಿ ಪ್ರಶಾಂತ್ ಕೋಟ್ಯಾನ್ ಸಂಚಯಗಿರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಿಕಟ ಪೂರ್ವ ಅಧ್ಯಕ್ಷರಾದ ಬಿ ಸಂಜೀವ ಪೂಜಾರಿ ಗುರುಕೃಪಾ, ಮಾಜಿ ಅಧ್ಯಕ್ಷರುಗಳಾದ ಕೆ. ಹರಿಕೃಷ್ಣ ಬಂಟ್ವಾಳ್, ರಾಮಪ್ಪ ಪೂಜಾರಿ ಮಾರ್ನಬೈಲು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೀರೇಂದ್ರ ಅಮೀನ್ ಗ್ಗ, ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಸತೀಶ್ ಬಿ. ಮಿತ್ತಬೈಲ್, ರಮೇಶ್ ತುಂಬೆ, ಗೋಪಾಲ್ ಪೂಜಾರಿ ಕಣೆಜಾಲು, ಬೇಬಿ ಕುಂದರ್ ಅಜ್ಜಿಬೆಟ್ಟು, ಲೋಕೇಶ್ ಕೋಟ್ಯಾನ್ ಎಕ್ಕುಡೇಲ್, ರಾಮಚಂದ ಸುವರ್ಣ ತುಂಬೆ, ಗಣೇಶ್ ಪೂಜಾರಿ ಪೂಂಜಾರೆಕೋಡಿ, ಹರೀಶ್ ಕೋಟ್ಯಾನ್ ಕುದನೆ, ರಾಜೇಶ್ ಸುವರ್ಣ ರಾಜಲಕ್ಷ್ಮಿ, ಪ್ರೇಮನಾಥ್ ಅಜೆಕಲ, ಭವಾನಿ ಕೆ ಮಾರ್ನಬೈಲ್, ಸತೀಶ್ ಪೂಜಾರಿ ಸಿದ್ದಕಟ್ಟೆ, ರೇವತಿ ರತ್ನಕರ್ ಬಡಗಬೆಳ್ಳೂರು, ಸತೀಶ್ ಕುಮಾರ್ ಅಮರ್ ರೆಸಿಡೆನ್ಸಿ, ಶಂಕರ್ ಪೂಜಾರಿ ಕಾಯರ್ ಮಾರ್, ಹೇಮಂತ್ ಕುಮಾರ್ ಮೂರ್ಜೆ, ಜಗದೀಶ್ ಕೊಯಿಲ, ಆಯ್ಕೆಯಾದರು ಚುನಾವಣಾಧಿಕಾರಿಯಾದ ಮಹಾಬಲ ಬಂಗೇರ ರವರು ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ಯನ್ನು ನಡೆಸಿಕೊಟ್ಟರು.


