ಪಾಣೆಮಂಗಳೂರಿನಲ್ಲಿ ‘ ಆಟಿದ ತಮ್ಮನ ‘ ಕಾರ್ಯಕ್ರಮ

ಬಂಟ್ವಾಳ: ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ  ಗಾಣಿಗರ ಸೇವಾ ಸಂಘದ ವತಿಯಿಂದ ‘ಆಟಿದ ತಮ್ಮನ’ ಕಾರ್ಯಕ್ರಮ ಭಾನುವಾರ (ಜು.27) ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಕೃಷಿಕರಾದ ಯಶೋಧ ಸಂಜೀವ ಸಪಲ್ಯ ಕೇದಗೆ ಉದ್ಘಾಟಿಸಿ, ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಮಾತನಾಡಿದ ಜ್ಯೋತಿಷಿ ಪ್ರಕಾಶ್ ಕುಮಾರ್ ಪುತ್ರೋಟಿಬೈಲು ಅವರು ತುಳುನಾಡಿನ ಜನ ಜೀವನವು ಕೃಷಿ ಪದ್ಧತಿ ಯೊಂದಿಗೆ ಬೆರೆತುಕೊಂಡಿದ್ದು, ಆಹಾರ ಪದ್ಧತಿ ಮತ್ತು ಸಂಪ್ರದಾಯ ಅರ್ಥಪೂರ್ಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾ. ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್. ಮಾವೆ, ವಿಟ್ಲ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ್ ವಿಟ್ಲ, ನೋಟರಿ ವಕೀಲ ರವಿ ಕುಮಾರ್,  ಉದ್ಯಮಿ ಜನಾರ್ದನ ಅರ್ಕುಳ ಶುಭ ಹಾರೈಸಿದರು. ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕಿ ವಿದ್ಯಾ ಗಾಣಿಗ,  ಉದ್ಯಮಿ ಪುಷ್ಪಾ ಮನೋಜ್  ಮುಂಬೈ, ಸುಮಂಗಲಾ ಕ್ರೆಡಿಟ್  ಸೊಸೈಟಿ  ಅಧ್ಯಕ್ಷ ನಾಗೇಶ್ ಕಲ್ಲಡ್ಕ,ಪ್ರಮುಖರಾದ ನರ್ಸಪ್ಪ ಅಮೀನ್, ಸಚಿನ್ ಮೆಲ್ಕಾರ್, ಬಾಲಕೃಷ್ಣ ಮಾಸ್ಟರ್, ವೇದವ ಗಾಣಿಗ, ನಾಗೇಶ್ ಎಂ, ಭುವನೇಶ್ ಮೊಗರ್ನಾಡು, ಲಿಂಗಪ್ಪ ಕರ್ಕೇರ, ಶರತ್ ಕುಮಾರ್, ಚರಣ್ ಮೆಲ್ಕಾರ್,  ಲತಾ ಮೆಲ್ಕಾರ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನಡೆಯಿತು. ವಿಶ್ವ ಗಾಣಿಗರ ಚಾವಡಿ ವತಿಯಿಂದ ನಡೆಯಲಿರುವ ರಕ್ತದಾನ ಮತ್ತು ಉಚಿತ ವೈದ್ಯಕೀಯ ತಪಾಸಣೆ ಆಮಂತ್ರಣ ಬಿಡುಗಡೆ ಗೊಂಡಿತು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿ, ವಸಂತ ಪಿ. ವಂದಿಸಿ, ಸಹನಾ ಇಡ್ಕಿದು, ಅನುಷಾ ಕಲ್ಲಡ್ಕ, ಜಯಶ್ರೀ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *