Breaking
19 Sep 2026, Sat

ಆಟಿ ಅಮಾವಾಸ್ಯೆಯ ಪ್ರಯುಕ್ತ ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡಿನಲ್ಲಿ ಪಾಲೆಯ ಕಷಾಯ ವಿತರಣೆ

ಬಂಟ್ವಾಳ: ತುಳುಕೂಟ ಬಂಟ್ವಾಳದ ಆಶ್ರಯದಲ್ಲಿ ಮತ್ತು ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡು ಇದರ ಆಡಳಿತ ಮಂಡಳಿಯ ಸಹಕಾರದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕ ಪಾಲೆದ ಕೆತ್ತೆಯ ವಿತರಣೆಯು ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕರಾದ ರಘುಪತಿ ಭಟ್ ಪೂಜೆ ನೆರವೇರಿಸಿದ ನಂತರ ಕಷಾಯ ವಿತರಣೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಸುದರ್ಶನ್ ಜೈನ್, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ವಿಶ್ವನಾಥ್, ಕೆ.ಸೀತಾರಾಮ್ ಶೆಟ್ಟಿ, N.ಶಿವಶಂಕರ್, ಸುಭಾಶ್ಚಂದ್ರ ಜೈನ್, ರಾಜೇಶ್ L ನಾಯಕ್, ಸೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ ಸಿ.ಪೆರ್ನೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಪದ್ಮನಾಭ ರೈ, ಸತೀಶ್ ಕುಮಾರ್ ಕಾರ್ತಿಕ್, ಪರಮೇಶ್ವರ ಮೂಲ್ಯ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ದಾಮೋದರ್ ಮಾಸ್ಟರ್ ಏರ್ಯ, ಸ್ವಜೇಶ್ ಜೈನ್, ಸನ್ಮತಿ ಜೆ.ಜೈನ್ ಉಪಸ್ಥಿತರಿದ್ದರು.

ತುಳುಕೂಟದ ಕಾರ್ಯದರ್ಶಿ ಎಚ್ಕೆ ನಯನಾಡು ಸ್ವಾಗತಿಸಿ ವಂದಿಸಿದರು. ಬಿ.ಸಿ.ರೋಡು ಸುತ್ತ ಮುತ್ತಲಿನ ಸುಮಾರು 500 ಕ್ಕಿಂತಲೂ ಹೆಚ್ಚು ಜನರು ಹಾಳೆ ಮದ್ದು ಸ್ವೀಕರಿಸಿದರು.

Leave a Reply

Your email address will not be published. Required fields are marked *