ಸಿದ್ದಕಟ್ಟೆ: ಯಕ್ಷಗಾನದ ಮೇರು ಕಲಾವಿದರಾಗಿ ಗುರುತಿಸಿಕೊಂಡು ಬಣ್ಣದ ವೇಷದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಹಾಗೂ ಹಾಸ್ಯ ಕಲಾವಿದರಾಗಿ ಪ್ರೇಕ್ಷಕರನ್ನು ರಂಜಿಸಿದ ಸಿದ್ದಕಟ್ಟೆ ಪದ್ಮನಾಭ ಶೆಟ್ಟಿಗಾರ್ ಅವರು ಅಕಾಲಿಕವಾಗಿ ಅಗಲಿದ್ದು ಅವರಿಗೆ ಜು.26ರಂದು ಸಿದ್ದಕಟ್ಟೆ ಪಲ್ಗುಣಿ ಕಾಂಪ್ಲೆಕ್ಸ್ ನ ನೇತ್ರಾವತಿ ಸಭಾಭವನದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶನಿವಾರ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಆತ್ಮೀಯರು, ಕಲಾವಿದರು, ಕಲಾ ಪೋಷಕರು ಹಾಗೂ ಅವರ ಅಭಿಮಾನಿಗಳು ಭಾಗವಹಿಸಿ, ಅಗಲಿದ ದಿವ್ಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಬೇಕಾಗಿ ಕೇಳಿಕೊಂಡಿದ್ದಾರೆ.



