Breaking
20 Sep 2026, Sun

ಮಣಿಪಾಲದ ವಸತಿ ಗೃಹದ ಸೆಕ್ಯೂರಿಟಿ ಗಾರ್ಡ್ ವೇಶ್ಯಾವಾಟಿಕೆ ಆರೋಪದಡಿಯಲ್ಲಿ ಬಂಧನ

ಮಣಿಪಾಲ: ಹೆರ್ಗ ಗ್ರಾಮದ ಈಶ್ವರನಗರದ ಅಪಾರ್ಟ್ ಮೆಂಟ್ ನಲ್ಲಿ ಮಹಿಳೆಯೊಬ್ಬರನ್ನು ಬಲವಂತವಾಗಿ ಇರಿಸಿ ಅಕ್ರಮ ವೇಶ್ಯಾವಾಟಿಕೆಗೆ ನಡೆಸಿದ ಆರೋಪದಡಿಯಲ್ಲಿ ವಸತಿ ಗೃಹದ ಸೆಕ್ಯೂರಿಟಿ ಗಾರ್ಡ್ ನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹೊನ್ನಾವರ ತಾಲೂಕು ಜಲವಳ್ಳಿ ಗ್ರಾಮದ ಗಣೇಶ್ ಗಣಪ ನಾಯ್ಕ್ (38) ಎಂದು ಗುರುತಿಸಲಾಗಿದೆ.

ಮನೆಯ ಮಾಲಕರು ಹೊರಗೆ ಹೋಗುವಾಗ ಮನೆಯ ಬೀಗದ ಕೀಯನ್ನು ವಸತಿ ಗೃಹದ ಸೆಕ್ಯೂರಿಟಿ ಗಾರ್ಡ್ ಜೊತೆ ಕೊಟ್ಟು ಹೊಗುತ್ತಿದ್ದರು. ಇದನ್ನೇ ದುರುಪಯೋಗಪಡಿಸಿ ಆತ ವೇಶ್ಯಾವಾಟಿಕೆ ವ್ಯವಹಾರ ನಡೆಸುತಿದ್ದ ಎನ್ನಲಾಗಿದೆ.

ವಿಷಯದ ಬಗ್ಗೆ ಮಾಹಿತಿ ಪಡೆದ ಮಣಿಪಾಲ ಪೊಲೀಸರು ದಾಳಿ ನಡೆಸಿ ನೊಂದ ಮಹಿಳೆಯನ್ನು ರಕ್ಷಿಸಿ ಆರೋಪಿ ಗಣೇಶ ನಾಯ್ಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Leave a Reply

Your email address will not be published. Required fields are marked *