Breaking
20 Sep 2026, Sun

ಮಳೆಗೆ ಮನೆ ಕುಸಿತ: 2 ವರ್ಷದ ಬಾಲಕಿ ಸಾವು, ಐವರಿಗೆ ಗಾಯ

ಗಂಗಾವತಿ: ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದ ಗಂಗಾವತಿ ತಾಲೂಕಿನ ಹೆಬ್ಭಾಳ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದು ಮಗು ಮೃತಪಟ್ಟಿರುವ ಘಟನೆ ಇಂದು (ಜು.17) ನಡೆದಿದೆ.

ಮೃತಪಟ್ಟ ಬಾಲಕಿ ಹೆಬ್ಬಾಳ ಗ್ರಾಮದ ಪ್ರಶಾಂತಿ (2 ವ) ಎಂದು ಗುರುತಿಸಲಾಗಿದೆ.

ಮನೆ ಕುಸಿತದಿಂದ ಹನುಮಂತಿ (28),ಕುಟುಂಬ ಸದಸ್ಯರಾದ ದುರಗಮ್ಮ(65), ಭೀಮಮ್ಮ (19), ಹುಸೇನಪ್ಪ (46), ಫಕೀರಪ್ಪ ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹಾಗೂ ತಹಶೀಲ್ದಾರ್ ಯು.ನಾಗರಾಜ್, ಗ್ರಾಮೀಣ ಸಿಪಿಐ ರಂಗಪ್ಪ ದೊಡ್ಮನಿ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *