Breaking
20 Sep 2026, Sun

ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿ ನಾಪತ್ತೆಯಾಗಿದ್ದ ಮೀನುಗಾರರ ಮೃತದೇಹಗಳು ಪತ್ತೆ

ಕುಂದಾಪುರ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ನಾಪತ್ತೆಯಾಗಿದ್ದ ಮೀನುಗಾರರ ಮೃತದೇಹ ಕೋಡಿಯ ಕಿನಾರ ಬಳಿ ಪತ್ತೆಯಾಗಿದೆ.

ಜುಲೈ 15 ರಂದು ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಸಮುದ್ರಕ್ಕೆ ಹೊರಟಿದ್ದ ದೋಣಿ ಅಲೆಗಳ ರಭಸಕ್ಕೆ ಸಿಲುಕಿ ಮಗುಚಿ, ನಾಲ್ಕು ಮೀನುಗಾರರ ಪೈಕಿ ಓರ್ವ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾನೆ. ಉಳಿದ ಮೂವರು ನಾಪತ್ತೆಯಾಗಿದ್ದರು.

ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ, ಮುಳುಗು ತಜ್ಞರ ಶೋಧ ಕಾರ್ಯದಲ್ಲಿ ತೊಡಗಿದ್ದು ನೈಸರ್ಗಿಕ ಪ್ರಕ್ರಿಯೆಯೆಂತೆ 12 ಗಂಟೆ ಅಂತರದಲ್ಲಿ ನಾಪತ್ತೆಯಾದವರ ಮೃತದೇಹ ಪತ್ತೆ ಮಾಡುವಲ್ಲಿ ಯಶಸ್ವಿಯಾದರು.

Leave a Reply

Your email address will not be published. Required fields are marked *