Breaking
25 Mar 2026, Wed

ಲಾರಿ ಚಾಲಕನ ನಿರ್ಲಕ್ಷ್ಯದಿಂದ ನಗರಸಭಾ ಚರಂಡಿ ಸ್ಲ್ಯಾಬ್ ಮುರಿತ

ಪುತ್ತೂರು: ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆ ರಸ್ತೆಯ ಪ್ರೆಸ್ ಕ್ಲಬ್ ಸಮೀಪವಿರುವ ಚರಂಡಿಗೆ ಹಾಕಲಾಗಿದ್ದ ಸ್ಲ್ಯಾಬ್ ಮೇಲೆ ನಿರ್ಲಕ್ಷ್ಯದಿಂದ ಲಾರಿಯನ್ನು ಚಲಾಯಿಸಿದ ಪರಿಣಾಮ, ಸ್ಲ್ಯಾಬ್ ಮುರಿದು ಚರಂಡಿಗೆ ಕುಸಿದಿದೆ.

ಪಕ್ಕದಲ್ಲೇ ಸರಕಾರಿ ಆಸ್ಪತ್ರೆಯ ಲ್ಯಾಬ್ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅಲ್ಲಿಗೆ ಸರಕು ಸಾಮಾನುಗಳನ್ನು ತರುತ್ತಿದ್ದ ಲಾರಿಯ ಚಾಲಕ ನಿಲ೯ಕ್ಷ್ಯದಿಂದ ಲಾರಿ ಚಲಾಯಿಸಿದ್ದ ಪರಿಣಾಮ ಸ್ಲ್ಯಾಬ್ ಮುರಿದು ಕುಸಿದು ಬಿದ್ದಿದೆ ಎನ್ನಲಾಗಿದೆ.

ಲ್ಯಾಬ್ ಕಾಮಗಾರಿ ಆರಂಭವಾದ ಬಳಿಕ ಈ ಪ್ರದೇಶದಲ್ಲಿ ಜನಬಿಡತೆ ಹೆಚ್ಚಾಗಿದ್ದು, ರಸ್ತೆ ಕೂಡ ಕಿರಿದಾಗಿರುವ ಕಾರಣ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದರೆ ಗುತ್ತಿಗೆದಾರರು ಈ ಕುರಿತು ಯಾವುದೇ ಜವಾಬ್ದಾರಿ ವಹಿಸುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.

ಲಾರಿ ಚಾಲಕನ ನಿರ್ಲಕ್ಷ್ಯದಿಂದ ನಗರಸಭೆಯ ಸೊತ್ತುಗಳಿಗೆ ನಷ್ಟ ಉಂಟಾದ ಹಿನ್ನೆಲೆಯಲ್ಲಿ, ಪುತ್ತೂರು ಪ್ರೆಸ್ ಕ್ಲಬ್ ವತಿಯಿಂದ ನಗರಸಭೆ ಆಡಳಿತಕ್ಕೆ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *